ʼಬಿಲ್ಲ ರಂಗ ಭಾಷಾʼ ಬಗ್ಗೆ ಕಿಚ್ಚನಿಂದ ಗುಡ್ ನ್ಯೂಸ್ಶೂ-ಟಿಂಗ್‌ಗೆ ಡೇಟ್ ಫಿಕ್ಸ್-ಕಹಳೆ ನ್ಯೂಸ್

ಬೆಂಗಳೂರು: ʼಮ್ಯಾಕ್ಸ್ʼ ಹಿಟ್ ಬಳಿಕ ‘ಬಿಲ್ಲ ರಂಗ ಭಾಷಾʼ ಚಿತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.
‘ಮ್ಯಾಕ್ಸ್ʼ ಸಕ್ಸಸ್ ಕಿಚ್ಚನ ಅಭಿಮಾನಿಗಳನ್ನು ಖುಷ್ ಆಗಿಸಿದೆ. ಈ ಚಿತ್ರದ ನಂತ್ರ ಅನೂಪ್ ಭಂಡಾರಿ ಅವರ ʼಬಿಲ್ಲ ರಂಗ ಬಾಷʼ ದಲ್ಲಿ ಸುದೀಪ್ ನಟಿಸುತ್ತಿರುವುದು ಗೊತ್ತೇ ಇದೆ.
ಆದರೆ ಚಿತ್ರದ ಅವರ ಅಭಿಮಾನಿಗಳು ಅಪ್ಡೇಟ್‌ಗಾಗಿ ಕಾದು ಕಾದು ಸುಸ್ತಾಗಿದ್ದರು.
ಇತ್ತೀಚೆಗಷ್ಟೇ ಸುದೀಪ್ ಜಿಮ್ ವರ್ಕೌಟ್‌ನಲ್ಲಿನ ಫೋಟೋವನ್ನು ಹಂಚಿಕೊಂಡು “ಕಿಚ್ಚ ಏಪ್ರಿಲ್ 16ರಂದು” ಎಂದು ಬರೆದು ಪಕ್ಕದಲ್ಲಿ ಗಡಿಯಾರದ ಇಮೋಜಿಯೊಂದನ್ನು ಹಾಕಿದ್ದರು.
ಏ.16ಕ್ಕೆ ‘ಬಿಲ್ಲ ರಂಗ ಭಾಷಾʼ ಬಗ್ಗೆ ಬಿಗ್ ಅಪ್ಡೇಟ್ ನೀಡುತ್ತಾರೆ ಎನ್ನಲಾಗಿತ್ತು. ಆದರೆ ವಾರದ ಮೊದಲೇ ಸುದೀಪ್ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಏಪ್ರಿಲ್ 16 ಕ್ಕೆ ‘ಬಿಲ್ಲ ರಂಗ ಭಾಷಾʼ ಸೆಟ್ಟೇರಲಿದೆ ಎಂದು ಸುದೀಪ್ ಹೇಳಿದ್ದಾರೆ. ಆ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ.
ಸಿನಿಮಾದ ಸೆಟ್, ತಾರಾಗಣ ಮತ್ತು ಇತರೆ ವಿಚಾರಗಳನ್ನು ನಂತರ ತಿಳಿಸಲಾಗುವುದು ʼಎಕ್ಸ್ʼ ಸುದೀಪ್ ಹೇಳಿದ್ದಾರೆ.