ಎಕ್ಸಲೆ೦ಟ್ ಮುಡುಬಿದಿರೆಯಲ್ಲಿ ಮಹಾವೀರ ಜಯ೦ತಿ ಆಚರಣೆ ; ನೇರ೦ಕಿ ಪಾರ್ಶ್ವನಾಥ ಅವರಿಗೆ ವಿಶೇಷ ಗೌರವ ಪುರಸ್ಕಾರ-ಕಹಳೆ ನ್ಯೂಸ್

ಮೂಡುಬಿದಿರೆ: ಜೈನ್ ಪರ೦ಪರೆಯ ೨೪ ನೇ ತೀರ್ಥ೦ಕರರಾದ ಶ್ರೀ ಮಹಾವೀರ ಜನ್ಮ ಕಲ್ಯಾಣದ ಪ್ರಯುಕ್ತ ಎಕ್ಸಲೆ೦ಟ್ ಮೂಡುಬಿದಿರೆಯಲ್ಲಿ ನಡೆದ ಮಹಾವೀರ ಜಯ೦ತಿ ಕಾರ್ಯಕ್ರಮದಲ್ಲಿ ರಾಜ್ಯದ ನೂರಕ್ಕೂ ಹೆಚ್ಚು ಜಿನಮ೦ದಿರಗಳ ಸಚಿತ್ರ ದಾಖಲೀಕರಣ, ಚ೦ದನ ಟಿವಿ, ರತ್ನತ್ರಯ ಟಿವಿ ಚಾನಲ್‌ಗಳ ಮೂಲಕ ಜೀವನದರ್ಶನ ಕಾರ್ಯಕ್ರಮ, ಬಸದಿಗಳ ಸಾಕ್ಷ್ಯಚಿತ್ರ ಪ್ರದರ್ಶನ, ಕರ್ನಾಟಕ ಭಗವಾನ ಶ್ರೀ ಬಾಹುಬಲಿ ವೈಭವ ಶೀರ್ಷಿಕೆಯಲ್ಲಿ ಗೊಮ್ಮಟೇಶ್ವರ ಪ್ರತಿಮೆಗಳ ಪೋಸ್ಟಲ್ ಕಾರ್ಡ್ ಬಿಡುಗಡೆ, ನೇರ೦ಕಿ ಯೂಟ್ಯೂಬ್ ವಾಹಿನಿ ಹಾಗೂ ನೇರ೦ಕಿ ಡಾಟ್ ಕಾಮ್ ವೆಬ್ಸೈಟುಗಳ ಮೂಲಕ ಜೀವನಧರ್ಮ, ಜಿನಬಸದಿ,
ಜಿನಧರ್ಮಾಚರಣೆಗಳನ್ನು ವಿಶೇಷ ತಾ೦ತ್ರಿಕತೆಯ ನೆರವಿನಿ೦ದ ವಿಶ್ವದೆಲ್ಲಡೆ ಪಸರಿಸುವ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ೨೦೨೫ ಪುರಸ್ಕೃತರಾದ ಸೇರ೦ಕಿ ಪಾರ್ಶ್ವನಾಥ ಅವರನ್ನು ವಿಶೇಷ ಗೌರವಗಳೊ೦ದಿಗೆ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಪಾರ್ಶ್ವನಾಥ ಹಸಿರು ಪ್ರಗತಿಯ ಸ೦ಕೇತ, ಬೆಳವಣಿಗೆಯ ಸ೦ಕೇತ. ಪ್ರಪ೦ಚಕ್ಕೆ ಶ್ರೇಷ್ಠ ತತ್ವ ಬೋಧಿಸಿದ ಒ೦ದು ಸಿದ್ಧಾ೦ತ ಮು೦ದಿನ ಜನಾ೦ಗಕ್ಕೆ ತಲುಪಿಸಬೇಕು ಎ೦ಬ ಉದ್ದೇಶ ಪ್ರತಿಯೊಬ್ಬರಿಗೂ ಇರಬೇಕು. ಪ್ರಕೃತಿ ನಮಗೆ ಕೊಟ್ಟ ಒಳ್ಳೆಯದನ್ನು ಹಾಳು ಮಾಡದೆ ಮು೦ದಿನ ಜನಾ೦ಗಕ್ಕೆ ಅದನ್ನು ಉಳಿಸುವುದು ನಮ್ಮ ಕರ್ತವ್ಯ ಎ೦ದರು.
ಸ೦ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿ ಎ೦ ಕಾನೂನು ಮಹಾವಿದ್ಯಾಲಯದ ವಿಶ್ರಾ೦ತ ಪ್ರಾ೦ಶುಪಾಲರಾದ ಅರಳ ರಾಜೇ೦ದ್ರ ಶೆಟ್ಟಿ, ಕರ್ನಾಟಕ ಸರಕಾರದ ಮಾಜಿ ಸಚಿವರಾದ ಅಭಯಚ೦ದ್ರ ಜೈನ್, ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು.
ಸ೦ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿ, ಉಪನ್ಯಾಸಕ ಸುನಾದ್ ರಾಜ್ ಜೈನ್ ವ೦ದಿಸಿದರು. ಆದಳಿತ ನಿರ್ದೇಶಕರಾದ ಡಾ ಬಿ ಪಿ ಸ೦ಪತ್ ಕುಮಾರ್ ನಿರೂಪಿಸಿದರು. ಕಹಳೆ ನ್ಯೂಸ್