Thursday, April 17, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ -ಕಹಳೆ ನ್ಯೂಸ್

Oplus_0

ಪುತ್ತೂರು: ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನಲ್ಲಿ ೨೦೨೫ ರ ಮಾರ್ಚ್ನಲ್ಲಿ ನಡೆದ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪುತ್ತೂರಿನ ವಿವೇಕಾನಂದ ಕಾಲೇಜಿನ ಶ್ರೀ ರಕ್ಷಾ (ವಿಜ್ಞಾನ), ದೀಕ್ಷಾ ಜೋಗಿ(ವಾಣಿಜ್ಯ) ಪದವಿಪೂರ್ವ ಕಾಲೇಜು ಮುಂಡಾಜೆ ಇಲ್ಲಿಯ ಕೆ.ಎನ್ ಧನುಷ್( ಕಲಾವಿಭಾಗ) ಹಾಗೂ ಎಂ.ಎಚ್ ಅನ್ವಿತಾ (ವಾಣಿಜ್ಯ), ಕಲ್ಲಡ್ಕ ಪದವಿಪೂರ್ವ ಕಾಲೇಜಿನ ಆಶಿಕಾ (ವಿಜ್ಞಾನ), ಪ್ರಜ್ಞಾ( ವಾಣಿಜ್ಯ), ಮಾನಸ ಬಾಳಿಗ ( ಕಲಾ) ಹಾಗೂ ಉಪ್ಪಿನಂಗಡಿಯ ಇಂದ್ರಪ್ರಸ್ಥ ಕಾಲೇಜಿನ ಪ್ರಾಪ್ತಿ(ವಿಜ್ಞಾನ ) ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್, ಪ್ರಾಂಶುಪಾಲ ಪ್ರೊ. ವಿ.ಜಿ ಭಟ್, ಉಪಪ್ರಾಂಶುಪಾಲ ಪ್ರೊ.ಶಿವಪ್ರಸಾದ್, ಸಾಧಕ ವಿದ್ಯಾರ್ಥಿಗಳ ಹೆತ್ತವರು ಹಾಗೂ ಉಪನ್ಯಾಸಕ ವೃಂದ ಉಪಸ್ಥಿತರಿದ್ದು ಸಾಧಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ