ಗುರುವೆಂದರೆ ಗುರಿ,ಗುರು ಎಂದರೆ ಸನ್ಮಾರ್ಗ ,ಮುಗ್ಧ ಬಳ್ಳಿ ಗಳoತಿರುವ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಮಹಾನ್ ಸಾಧಕ; ಪಾಂಗಳ ರಾಜೇಶ್ ರಾವ್ -ಕಹಳೆ ನ್ಯೂಸ್

ಉಡುಪಿ:ಗುರುವೆಂದರೆ ಗುರಿ,ಗುರು ಎಂದರೆ ಸನ್ಮಾರ್ಗ ,ಮುಗ್ಧ ಬಳ್ಳಿ ಗಳ oತಿರುವ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಮಹಾನ್ ಸಾಧಕ ,ಆದ್ದರಿಂದ ಗುರು ಉಪಮತೀತ ಪಾಂಗ ಳ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ 32ವರ್ಷಗಳ ಕಾಲ ಸೇವೆ ಸಲ್ಲಿಸಿ ಗೌರವ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಾಂಗಳ ರಾಜೇಶ್ ರಾವ್ ನುಡಿದರು.
ಮಕ್ಕಳ ಭವಿಷ್ಯದ ಚಿಂತನೆಯೊಂದಿಗೆ ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡುವ ಗುರುವಿನ ಪಾತ್ರಕ್ಕೆ ಸಮಾನಾದ ಕೆಲಸ ಬೇರೊಂದಿಲ್ಲ.ಕಾಣುವ ಸಾಧನೆ ಗಳು, ಮುಟ್ಟುವ ಗುರಿಯ ಹಿಂದೆ ಒಬ್ಬ ಗುರುವಿನ ಪ್ರಯತ್ನ ಖಂಡಿತ ಇರುತ್ತದೆ.ಆದ್ದರಿಂದ ಗುರುವನ್ನು ಯಾರು ಸನ್ಮಾನ ಮಾಡಲು ಅಗುದಿಲ್ಲ.ನಾವೆಲ್ಲರೂ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯಲು ಬಂದವರು ಎಂದು ಕಾರ್ಯಕ್ರಮದ ಅಧ್ಯಕ್ಷ ಭಾಷಣದಲ್ಲಿ ನುಡಿದರು.
ಪಾಂಗಳ ವಿದ್ಯಾವರ್ಧಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಗುರುವಂದನಾ ಗೌರವ ಬೀಳ್ಕೊಡುಗೆ ಸಮಾರಂಭದಲ್ಲಿ ತನ್ನನ್ನು ಗೌರವಿಸಿದಕ್ಕೆ ನಾನು ಋಣಿಯಾಗಿದ್ದೇನೆ.ನಾನು ಶಿಕ್ಷಕನಾಗಿ ಸೇವೆ ಸಲ್ಲಿಸಿ ಕರ್ತವ್ಯ ನಿರ್ವಹಿಸಿದ್ದೇನೆ.ಸಾವಿರಾರು ಮಕ್ಕಳು ಗುರಿ ಮುಟ್ಟಿ ಸಾದನೆ ಮಾಡುತ್ತಿರುವ ಚಿತ್ರ ನನಗೆ ತೃಪ್ತಿ ಕೊಟ್ಟಿದೆ.ಇನ್ನು ಮುಂದಕ್ಕೆ ಈ ಶಾಲೆಯಲ್ಲಿ ಮಕ್ಕಳಿಗಾಗಿ ಸದಾ ಶ್ರಮಿಸುತ್ತೇನೆ,ಅವಕಾಶ ಕೊಡಿ ಮತ್ತು ಕನ್ನಡ ಮಾದ್ಯಮ ಉಳಿಸಿ ಬೆಳೆಸಲು ನಾವೆಲ್ಲರೂ ಶ್ರಮಿಸಬೇಕು ಎಂದು ಗೌರವ ಸ್ವೀಕರಿಸಿದ ಶಿಕ್ಷಕರಾದ ಫ್ರಾನ್ಸಿಸ್ ವಿನೇಜಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಿ ಎ ಬ್ಯಾಂಕ್ ಅಧ್ಯಕ್ಷರು ಸಿಬ್ಬಂದಿಗಳು ,ಶಾಲಾ ಆಡಳಿತ ಮಂಡಳಿ ಸಂಚಾಲಕರು,ನಿವೃತ್ತ ಮುಖ್ಯೋಪಾಧ್ಯಾಯ ನಳಿನೀ ಶೆಟ್ಟಿ,ನಿವೃತ್ತ ಶಿಕ್ಷಕಿ ಶಕುಂತಲಾ,ವಿದ್ಯಾವರ್ಧಕ ಶಾಲೆಯ ಶಿಕ್ಷಕ ವರ್ಗ ಮತ್ತು ಹಳೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಉಪಸ್ಥಿತಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.