Tuesday, April 22, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಗ್ರಾಮಭಿವೃದ್ಧಿ ಯೋಜನೆ ಯ ಮೂಲಕ ಮಾಡಿದ ಎಲ್ಐಸಿ ಮೈಕ್ರೋ ಬಚತ್ ಪಾಲಿಸಿಯ ಪರಿಹಾರ ಮೊತ್ತವನ್ನು ಹಸ್ತಾಂತರ – ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ .ಟ್ರಸ್ಟ್. (ರಿ) ಬಂಟ್ವಾಳ ತಾಲೂಕು ಇದರ ವಾಮದಪದವು ಕೊಡಂಬೆಟ್ಟು ಗ್ರಾಮದ ಶ್ರೀ ಶಾರದಾ ಸ್ವ ಸಹಾಯ ಸಂಘದ ಗುಂಪಿನ ಸದಸ್ಯರಾದ ಶ್ರೀಮತಿ ಗೀತಾ ರವರು ಅನಾರೋಗ್ಯದ ಕಾರಣ ಮರಣ ಹೊಂದಿದ್ದು, ಯೋಜನೆಯ ಮೂಲಕ ಎಲ್ಐಸಿ ಯಿಂದ ಮಾಡಿದ ಮೈಕ್ರೋ ಬಚತ್ ಪಾಲಿಸಿಯಿಂದ ಮoಜೂರಾದ ಎರಡು ಲಕ್ಷ ದ ಪರಿಹಾರ ಮೊತ್ತವನ್ನು ಪಾಲಿಸಿದ್ದಾರ ಗೀತಾ ರವರ ಮಗನಾದ ಸುದೀಪ್ ರವರಿಗೆ ಹಸ್ತಾಂತರ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಗ್ರಾಮಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ .ಪಿ. ಚೆನ್ನತೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಆಚಾರ್ಯ, ಭಾರತಿ ಗಟ್ಟಿ, ಊರಿನ ಪ್ರಮುಖರಾದ ಅಮ್ಮು ರೈ , ಯೋಜನೆಯ ಕೃಷಿ ಮೇಲ್ವಿ ಚಾರಕರಾಕ ಜಯರಾಮ, ವಲಯದ ಮೇಲ್ವಿಚಾರಕರಾಕಿ ಸವಿತಾ, ಸೇವಾ ಪ್ರತಿನಿಧಿ ಮೋಹನ್ ದಾಸ್ ಗಟ್ಟಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ