Thursday, April 17, 2025
ಜಿಲ್ಲೆದಕ್ಷಿಣ ಕನ್ನಡಬೆಂಗಳೂರುರಾಜ್ಯಸುದ್ದಿ

ಬೆಂಗಳೂರಿನಲ್ಲಿ ಆಕಸ್ಮಿಕ ಬೆಂಕಿ ಅವಘಡ: 20ಕ್ಕೂ ಅಧಿಕ ಶೆಡ್ ಭಸ್ಮ-ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು 20ಕ್ಕೂ ಹೆಚ್ಚು ಶೆಡ್‌ಗಳು ಸುಟ್ಟು ಭಸ್ಮವಾಗಿವೆ. ಕೂಲಿ ಕಾರ್ಮಿಕರು ವಾಸವಿದ್ದ ಶೆಡ್ಡುಗಳಿಗೆ ಕಳೆದ ದಿನ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಶೆಡ್ಡುಗಳು ಒಂದೊಂದಾಗಿ ಸುಟ್ಟು ಕರಕಲಾಗಿವೆ.

ಹೌದು ಬೆಂಗಳೂರಿನ ವೀರಣ್ಣಪಾಳ್ಯ ಮುಖ್ಯ ರಸ್ತೆಯ ಬಳಿ ಈ ಘಟನೆ ನಡೆದಿದೆ. ಕೂಲಿ ಕಾರ್ಮಿಕರಿಗಾಗಿ ಆಟಿಕೆ ಫ್ಯಾಕ್ಟರಿಯೊಂದು ಈ ಶೆಡ್ಡುಗಳನ್ನು ನಿರ್ಮಾಣ ಮಾಡಿತ್ತು. ಸುಮಾರು 50 ಶೆಡ್ಡುಗಳಲ್ಲಿ 20ಕ್ಕೂ ಅಧಿಕ ಶೆಡ್‌ಗಳು ಬೆಂಕಿಗಾಹುತಿಯಾಗಿವೆ. ಈ ಶೆಡ್ಡುಗಳಲ್ಲಿ ಇದ್ದ ಆಟಿಕೆಗಳು ಸೇರಿದಂತೆ ಕಾರ್ಮಿಕರ ಬಟ್ಟೆ, ಹಾಸಿಗೆ,. ಹಣ ಇನ್ನಿತರ ವಸ್ತುಗಳು ಸುಟ್ಟು ಹೋಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಗೆ ಸೂಕ್ತ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬೆಂಕಿ ಅವಘಡದಿಂದಾಗಿ ರಾಯಚೂರು ಕೂಲಿ ಕಾರ್ಮಿಕನ ಜೀವನ ಬೀದಿಗೆ ಬಂದಿದೆ. ಕಷ್ಟಪಟ್ಟು ದುಡಿದು ಶೆಡ್‌ನಲ್ಲಿ ಇಟ್ಟ ಹಣವೆಲ್ಲಾ ಸುಟ್ಟು ಕರಕಲಾಗಿ ಹೋಗಿದ್ದು ಕಾರ್ಮಿಕ ಗೋಳಾಡಿದ್ದಾನೆ. ಬೆಂಕಿಗೆ ಆಹುತಿಯಾದ ಶೆಡ್‌ಗಳನ್ನು ತುಂಬಾ ಹತ್ತಿರದಲ್ಲಿ ನಿರ್ಮಾಣ ಮಾಡಲಾಗಿದೆ. ಆರಂಭದಲ್ಲಿ ಒಂದು ಶೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಆ ಬೆಂಕಿ ಕೆನ್ನಾಲಿಗೆಗೆ ಉಳಿದ ಶೆಡ್‌ಗಳು ಆಹುತಿಯಾಗಿವೆ.

ವೀರನಪಾಳ್ಯ ಮುಖ್ಯ ರಸ್ತೆಯ ಖಾಸಗಿ ಶಾಲೆಯ ಪಕ್ಕದಲ್ಲಿ ಇರುವ ಶೆಡ್‌ಗಳನ್ನು ಆಟಿಕೆ ಫ್ಯಾಕ್ಟರಿ ಕೂಲಿ ಕಾರ್ಮಿಕರಿಗಾಗಿ ನಿರ್ಮಿಸಿ ಕೊಟ್ಟಿತ್ತು. ಅನೇಕ ವರ್ಷಗಳಿಂದ ಈ ಚಿಕ್ಕ ಚಿಕ್ಕ ಶೆಡ್‌ಗಳಲ್ಲಿ ನೂರಕ್ಕೂ ಹೆಚ್ಚು ಜನ ಕೂಲಿ ಕಾರ್ಮಿಕರು ವಾಸವಿದ್ದರು. ಕಳೆದ ರಾತ್ರಿ ಬೆಂಕಿ ಹೊತ್ತಿ ಉರಿದಿದ್ದರಿಂದ ದೇವಸ್ಥಾನದ ಅಂಗಳದಲ್ಲಿ ರಾತ್ರಿ ಕೂಲಿ ಕಾರ್ಮಿಕರು ಹಾಗೂ ಮಕ್ಕಳು, ಮಹಿಳೆಯರು ಮಲಗಿದ್ದಾರೆ.

ಅಲ್ಲದೆ ಫ್ಯಾಕ್ಟರಿ ಮಾಲೀಕ ಇಂದು ಬೆಳಗಿನ ಜಾವ ಬಂದು ಇತರೆ ಶೆಡ್‌ಗಳಲ್ಲಿರುವ ಜನರನ್ನು ಆದಷ್ಟು ಬೇಗ ಖಾಲಿ ಮಾಡುವಂತೆ ತಿಳಿಸಿದ್ದು ಕಾರ್ಮಿಕರು ಚಿಂತೆಗೀಡಾಗಿದ್ದಾರೆ. ಇದ್ದಕ್ಕಿದ್ದಂತೆ ಹೋಗಲು ಹೇಳಿದರೆ ಎಲ್ಲಿಗೆ ಹೋಗುವುದು? ನಮ್ಮ ಬಳಿ ಇದ್ದ ಹಣ, ಸಾಮಾಗ್ರಿಗಳೆಲ್ಲಾ ಸುಟ್ಟು ಹೋಗಿವೆ ಎಂದು ಕೂಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಏನಾದ್ರು ಸಹಾಯ ಮಾಡಬೇಕು ಎಂದು ಬೇಡಿಕೊಂಡಿದ್ದಾರೆ.