ವೀರಾಂಜನೇಯ ಯುವಕ ಸಂಘ ಟ್ರಸ್ಟ್ (ರಿ) ಸಜಿಪ ಇದರ ಆಶ್ರಯದಲ್ಲಿ ನಡೆಯುವ 35ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಅದೃಷ್ಟ ಚೀಟಿ ಯೋಜನೆಯ ಅದೃಷ್ಟ ಕೂಪನ್ ಬಿಡುಗಡೆ – ಕಹಳೆ ನ್ಯೂಸ್

ವೀರಾಂಜನೇಯ ಯುವಕ ಸಂಘ ಟ್ರಸ್ಟ್ (ರಿ) ಸಜಿಪ ಇದರ ಆಶ್ರಯದಲ್ಲಿ ನಡೆಯುವ 35ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಅದೃಷ್ಟ ಚೀಟಿ ಯೋಜನೆಯ ಅದೃಷ್ಟ ಕೂಪನ್ ಬಿಡುಗಡೆ ಕಾರ್ಯಕ್ರಮವು ದಿನಾಂಕ 13-04-2025 ರಂದು ನಡೆಯಿತು.
ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಮುಳ್ಳುಂಜ ವೆಂಕಟೇಶ್ವರ ಭಟ್ ಇವರು ಲಕ್ಕಿಡಿಪ್ ಪ್ರತಿಯನ್ನು ಅನಾವರಣ ಗೊಳಿಸಿದರು.
ಈ ಶುಭ ಸಂದರ್ಭದಲ್ಲಿ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರು ಶ್ರೀ ಗಣಪತಿ ಭಟ್ ,ಶ್ರೀ ಬಾಲಗಣಪತಿ ದೇವಸ್ಥಾನದ ಅಧ್ಯಕ್ಷರು ಯಶವಂತ್ ದೇರಾಜೆ ಗುತ್ತು, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಶ್ರೀ ಸುರೇಶ್ ಬಂಗೇರ ಆರ್ಯಾಪು, ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಕುಂಜತ್ತಬೈಲು ಇದರ ಅಧ್ಯಕ್ಷರು ಶ್ರೀ ಹರೀಶ್ ಬಂಗೇರ, ನೇತಾಜಿ ಯುವಕ ಸಂಘದ ಅಧ್ಯಕ್ಷರು ನಿತಿನ್ ಅರಸ ಹೊಯಿಗೆ ಮಜಲು, ಕಿಶನ್ ಸೇನವಾ ಅಂಕದ ಕೋಡಿ, ಸಂಘದ ಗೌರವಾಧ್ಯಕರು ರಾಮ ಪೂಜಾರಿ ದೇರಾಜೆ ಬರೆ ಶಿವಾಜಿ ಬಳಗ ಶಿವಾಜಿನಗರ ಇದರ ಸದಸ್ಯರಾದ ಕರುಣಾಕರ ಕುಲಾಲ್ ಶಿವಾಜಿನಗರ, ಪ್ರಮುಖರಾದ ದಿನೇಶ್ ದೇರಾಜೆ ಬೊಟ್ಟ, ಸಂತೋಷ್ ಹೊಯಿಗೆ ಮಜಲು, ಗಣೇಶ್ ದೇರಾಜೆ ಉಪಸ್ಥಿತರಿದ್ದು, ಸಂಘದ ಸ್ಥಾಪಕ ಅಧ್ಯಕ್ಷರು ಪ್ರಮೋದ್ ಸಾನದ ಮನೆ ಸ್ವಾಗತಿಸಿದರು, ಅಧ್ಯಕ್ಷರು ದೀಪಕ್ ಕೋಟ್ಯಾನ್ ವಂದಿಸಿದರು.