Wednesday, April 23, 2025
ದಕ್ಷಿಣ ಕನ್ನಡಪುತ್ತೂರುಬೆಳ್ತಂಗಡಿಮಂಗಳೂರುಸುದ್ದಿ

ವಿಹಾನ್ ಲೋಹಿತ್ ಹಾಡಿರುವ ಭಕ್ತಿ ಪ್ರಧಾನ ದಾಸರ ಪದ ” ಗಣಪತಿ ಎನ್ನ ಪಾಲಿಸೋ…. ” ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬಿಡುಗಡೆ – ಕಹಳೆ ನ್ಯೂಸ್

ವಿಹಾನ್ ಲೋಹಿತ್ ಹಾಡಿರುವ ಭಕ್ತಿ ಪ್ರಧಾನ ದಾಸರ ಪದ ದಿನಾಂಕ 14 ಏಪ್ರಿಲ್ ರಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬಿಡುಗಡೆಗೊಂಡಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಶುಭ ಸಂದೇಶ ನೀಡಿರುವ ಭಕ್ತಿ ಗೀತೆಯನ್ನು ಕೊಕ್ಕಡ ಗ್ರಾ.ಪಂ.ನಿಕಟಪೂರ್ವಧ್ಯಕ್ಷರು ಯೋಗೀಶ್ ಆಳಂಬಿಲ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕೋಮರ ಕುಂಜಿ ಕಣ್ಣನ್, ಸಾವಿತ್ರಿ, ವಿಶ್ವನಾಥ ಪಾಟಾಳಿ ಅರಂತನಡ್ಕ, ವಿಶಾಲಾಕ್ಷಿ, ವಿಶ್ವಕಲಾನಿಕೇತನ ನೃತ್ಯ ಶಾಲಾ ಗುರುಗಳಾದ ವಿದುಷಿ ಸ್ವಸ್ತಿಕಾ ಆರ್ ಶೆಟ್ಟಿ, ಛಾಯಾಗ್ರಾಹಕ ಹಾಗು ಚಲನಚಿತ್ರ ನಿರ್ದೇಶಕ ಕರೋಪಾಡಿ ಅಕ್ಷಯ್ ನಾಯಕ್, ರಂಜಿನಿ ಲೋಹಿತ್, ವಿಹಾನ್ ಲೋಹಿತ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಡಿಗೆ ಸಂಗೀತ ನಿರ್ದೇಶನಕ್ಕಾಗಿ ಸಾಥ್ವಿಕ್ ಪಡಿಯಾರ್ ಮಾಡಿದಾರೆ ಕೊಳಲು : ಸಾಥ್ವಿಕ್ ಪ್ರಭು , ವಾಯಲಿನ್ : ಜಗದೀಶ ಕುಂಬ್ರ, ಮೃದಂಗ & ಮೋರ್ಸಿಗ್ : ಬಾಲಕೃಷ್ಣ ಹೊಸಮನೆ ಇವರು ನುಡಿಸಿರುತಾರೆ.

ವಿಹಾನ್ ಲೋಹಿತ್ 8 ವರ್ಷದ ಬಾಲಕನಾಗಿದ್ದು, ಸಂಗೀತ ಮತ್ತು ಕಲೆಯ ಬಗ್ಗೆ ಅವನಿಗೆ ಅಪಾರವಾದ ಆಸಕ್ತಿ ಇದೆ. ಪ್ರಸ್ತುತ ಅವನು ಕರ್ನಾಟಕ ಸಂಗೀತ, ಪಿಟೀಲು ಮತ್ತು ಕೀಬೋರ್ಡ್ ಕಲಿಯುತ್ತಿದ್ದಾನೆ, ಜೊತೆಗೆ ಫುಟ್ಬಾಲ್, ಈಜು ಮತ್ತು ಲೈವ್ ಸ್ಕೆಚ್ ಕಲಾವಿದನಾಗಿ ತನ್ನ ಪ್ರತಿಭೆಯನ್ನು ಅನ್ವೇಷಿಸುತ್ತಿದ್ದಾನೆ.

ವಿಹಾನ್ ಸಂಗೀತಗಾರನಾಗುವ ಕನಸು ಕಾಣುತ್ತಾನೆ ಮತ್ತು ಈ ಪ್ರಯಾಣದಲ್ಲಿ ಅವನು ತನ್ನ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಚಾನೆಲ್ ಮೂಲಕ ತನ್ನ ಮೊದಲ ಹೆಜ್ಜೆಗಳನ್ನು ಇಡುತ್ತಿದ್ದಾನೆ: @Vihaanlohithofficial. ಅವನು ತನ್ನ ಹೃದಯವನ್ನು ಅನುಸರಿಸುತ್ತಾ ಮತ್ತು ಸಂಗೀತದ ಮೂಲಕ ಬೆಳೆಯುವಾಗ ನಿಮ್ಮ ಆಶೀರ್ವಾದ ಮತ್ತು ಬೆಂಬಲವನ್ನು ದಯೆಯಿಂದ ಬಯಸುತ್ತಾನೆ.

 

WATCH SONG :

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ