ಹುಬ್ಬಳ್ಳಿ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಬೆಚ್ಚಿಬೀಳಿಸೋ ಘಟನೆ : ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಕಿಡ್ನ್ಯಾಪ್ ಗೆ ಯತ್ನ.!– ಕಹಳೆ ನ್ಯೂಸ್

ಬೀದರ್ : ಹುಬ್ಬಳ್ಳಿ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮನೆ ಮುಂದೆ ಗೇಟ್ ಬಳಿ ಆಟವಾಡುತ್ತಿದ್ದ ಬಾಲಕಿ ಕಿಡ್ನ್ಯಾಪ್ ಗೆ ಯತ್ನಿಸಲಾಗಿದೆ.
ಬೀದರ್ ನಲ್ಲಿ ಈ ಘಟನೆ ನಡೆದಿದೆ. ಬಾಲಕಿ ಕಿಡ್ನ್ಯಾಪ್ ಗೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೀದರ್ ನ ವಿದ್ಯಾನಗರ ಬಡಾವಣೆಯ 11 ನೇ ಕ್ರಾಸ್ ನಲ್ಲಿರುವ ಸತೀಶ ಬಕ್ಕಾಚೌಡೇಕರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
ಯುವಕನೋರ್ವ ಮನೆ ಬಳಿ ಬೈಕ್ ನಿಲ್ಲಿಸಿದ್ದಾನೆ. ನಂತರ ಗೇಟ್ ಒಳಗೆ ಹೋಗಿ ಆಟವಾಡುತ್ತಿದ್ದ ಬಾಲಕಿ ಓರ್ವಳನ್ನು ಅಪಹರಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಪೋಷಕರು ಹೊರಬಂದಿದ್ದು, ಯುವಕ ಬೈಕ್ ಓಡಿಸಿಕೊಂಡು ಹೋಗಿ ಎಸ್ಕೇಪ್ ಆಗಿದ್ದಾನೆ.ಸದ್ಯ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೋಷಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.