Recent Posts

Wednesday, April 23, 2025
ಕೊಡಗುದಕ್ಷಿಣ ಕನ್ನಡಪುತ್ತೂರುಬೆಂಗಳೂರುಬೆಳ್ತಂಗಡಿಮಡಿಕೇರಿವಾಣಿಜ್ಯಸುದ್ದಿ

ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಹೊಸತನ ; ವಜ್ರಗಳ LGD ಟೆಸ್ಟಿಂಗ್ ಮಿಷನ್ – ಕಹಳೆ ನ್ಯೂಸ್

ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ ಬೆಳೆದು ನಿಂತ ವಿಶ್ವಾಸದ ಚಿನ್ನಾಭರಣಗಳ ಮಳಿಗೆ ಈಗ ಉದ್ಯಮದ ಇತಿಹಾಸದಲ್ಲೇ ಗ್ರಾಹಕ ಸಮ್ಮುಖದಲ್ಲೇ, ಭಾರತದಲ್ಲೇ ಪ್ರಪ್ರಥಮ ” ವಜ್ರದ ಮೂಲವನ್ನು ಗ್ರಾಹಕರಿಗೆ ತಿಳಿಸುವ” ಹೊಚ್ಚ ಹೊಸ ವಜ್ರ ಪರೀಕ್ಷಕಾ ಯಂತ್ರಗಳನ್ನು ಗ್ರಾಹಕ ಮುಖಿಯಾಗಿ ಪರಿಚಯಿಸುತ್ತಿದೆ .

ಕೆಲವೊಮ್ಮೆ ವಜ್ರಾಭರಣಗಳ ತಯಾರಿಕೆಯಲ್ಲಿ ನೈಜ ಮತ್ತು ಲ್ಯಾಬ್ ನಲ್ಲಿ ತಯಾರಾದ ವಜ್ರಗಳು ಮಿಶ್ರವಾಗಿರುವ ಸಂಭವ ಇರುತ್ತದೆ. ಕಾಲಕ್ರಮೇಣ ಲ್ಯಾಬ್ನಲ್ಲಿ ತಯಾರಾದ ಕೃತಕ ವಜ್ರಗಳ ಮೌಲ್ಯ ಕಡಿಮೆಯಾಗುತ್ತದೆ. ಗ್ರಾಹಕರಿಗೆ ಆಗುವ ನಷ್ಟವನ್ನು ತಪ್ಪಿಸಲು ಭಾರತದಲ್ಲಿ ಪ್ರಥಮ ಭಾರಿ ಗ್ರಾಹಕ ಮುಖಿಯಾಗಿ ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್ ( LGD) ಅಳವಡಿಸಲಾಗುತ್ತಿದೆ. ಮುಳಿಯ ಪರಿಚಯಿಸುತ್ತಿರುವ ಈ ವಿನೂತನ ಟೆಸ್ಟಿಂಗ್ ಮೀಶಿನ್ ನಲ್ಲಿ ನೈಜ ವಜ್ರ ಮತ್ತು ಲ್ಯಾಬ್ ನಲ್ಲಿ ಮಾಡಿದ ಕೃತಕ ವಜ್ರವನ್ನು ಪತ್ತೆ ಮಾಡಿ ಗ್ರಾಹಕರ ಸಮ್ಮುಖದಲ್ಲಿ ಇಟ್ಟು ವಜ್ರದ ಮೂಲವನ್ನು ಪರೀಕ್ಷಿಸಿ ನೋಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

” ಗ್ರಾಹಕರ ನಂಬಿಕೆ ಮತ್ತು ಸಂತೃಪ್ತಿಯನ್ನು ಮುಳಿಯ ಅತಿ ಮುಖ್ಯವಾಗಿಟ್ಟಿದೆ. ಲ್ಯಾಬ್ ಗ್ರೊನ್ ಡೈಮಂಡ್ ಅರಿವಿಲ್ಲದೆ ಖರೀದಿಸಿದರೆ ಗ್ರಾಹಕರಿಗೆ ಆಗುವ ನಷ್ಟವನ್ನು ತಪ್ಪಿಸಲು ಈ ಟೆಸ್ಟಿಂಗ್ ಮಶೀನ್ ಅನ್ನು ಪ್ರಸ್ತುತಪಡಿಸಲು ಹೆಮ್ಮೆಯೆನಿಸುತ್ತದೆ ಮುಳಿಯದ ಮೇಲೆ ಗ್ರಾಹಕರ ನಂಬಿಗೆ ಇನ್ನಷ್ಟು ಹೆಚ್ಚಿಸುವ ವಿಚಾರದಲ್ಲಿ ಇದೊಂದು ಗುರುತರ ಹೆಜ್ಜೆ” ಎಂದು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಅವರು ತಿಳಿಸಿರುತ್ತಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ