ಬಂಟ್ವಾಳದ ಯುವಕ ದಕ್ಷಿಣ ಆಫ್ರಿಕಾದಲ್ಲಿ ಮೃತ್ಯು : ಮೃತದೇಹ ಊರಿಗೆ ತಂದು ಅಂತ್ಯಕ್ರಿಯೆ – ಕಹಳೆ ನ್ಯೂಸ್

ಬಂಟ್ವಾಳ :ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ರವಿ ಸಫಲ್ಯ ರ ಮಗ ಶ್ರೀ ರಜತ್ (25)ಎಂಬುವವರು ಉದ್ಯೋಗ ನಿಮಿತ್ತ ದಕ್ಷಿಣ ಆಫ್ರಿಕಾ ದೇಶಕ್ಕೆ ತೆರಳಿದ್ದು, ಎ.5 ರಂದು ಅಕಾಲಿಕವಾಗಿ ಮರಣ ಹೊಂದಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ರಜತ್ ಮೃತ ದೇಹವನ್ನು ಊರಿಗೆ ತಂದು ನರಿಕೊಂಬು ಗ್ರಾಮದ ನಾಯಿಲ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಮೃತರು ತಂದೆ, ತಾಯಿ, ಹಾಗೂ ಅಪಾರ ಬಂಧು ಮಿತ್ರಗಳನ್ನು ಅಗಲಿದ್ದಾರೆ.
ಮೃತ ಶರೀರವನ್ನು ಊರಿಗೆ ತರಲು ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕಿಸಿ, ಸಂಸದರಾದ ಬ್ರಿಜೇಶ್ ಚೌಟ, ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪುರುಷೋತ್ತಮ ಸಾಲಿಯಾನ್ , ದಿನೇಶ್ ಅಮ್ಟೂರ್ ಉದಯ ಕುಮಾರ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಅಂತರ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರುಗಳು ಸಹಕರಿಸಿದರು.