
ವಿಶಾಖಪಟ್ಟಣಂ: ಬೆಟ್ಟಿಂಗ್ ವ್ಯಸನಕ್ಕೆ ಬಲಿಯಾಗಿ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ್ದ ಉದ್ಯೋಗಿಯನ್ನು ಪೊಲೀಸರು ರಕ್ಷಿಸಿದ ಘಟನೆ ಭೀಮಿಲಿ ಬೀಚ್ ರಸ್ತೆಯಲ್ಲಿ ನಡೆದಿದೆ.
ಪಿ.ಎಂ.ಪಲೆಂ ಸಿಐ ಜಿ. ಬಾಲಕೃಷ್ಣ ನೀಡಿದ ವಿವರಗಳ ಪ್ರಕಾರ, ಗಾಜುವಾಕ ಪ್ರದೇಶದ ಕೊಂಡ ಸುಂದರ್ (30) ತನ್ನ ಪತ್ನಿ ಮತ್ತು ಮಗಳೊಂದಿಗೆ ಪಿ.ಎಂ.ಪಲೆಂನಲ್ಲಿ ವಾಸಿಸುತ್ತಿದ್ದಾರೆ.