Sunday, January 19, 2025
ಸುದ್ದಿ

ಹಿರಿಯ ಸಹಕಾರಿ ಧುರೀಣ ಕೆ. ಸೀತಾರಾಮ ರೈಗೆ ಸನ್ಮಾನ – ಕಹಳೆ ನ್ಯೂಸ್

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ತಾಲೂಕು ಮಟ್ಟದ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭ ಇಂದು ನಡೆಯಿತು.
“ಎಲ್ಲರಿಗಾಗಿ ನಾನು , ನನಗಾಗಿ ಎಲ್ಲರೂ” ಎಂಬ ಸಂದೇಶವನ್ನು ಸಾರುತ್ತ, ಅರ್ಥಪೂರ್ಣ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಕ್ಷೇತ್ರ ಇದಾಗಿದೆ, ಶತಮಾನಗಳಷ್ಟು ಭವ್ಯ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರವನ್ನ ಇನ್ನಷ್ಟು ಪರಿಚಯಿಸುವ ಮತ್ತು ವಿಸ್ತರಿಸುವ ಸಲುವಾಗಿ ಸಹಕಾರಿ ಸಪ್ತಾಹವನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿದೆ. ಸಹಕಾರ ಕ್ಷೇತ್ರದ ಪರಿಚಯ ಪ್ರತಿಯೊಬ್ಬ ಜನಸಾಮಾನ್ಯನಿಗೂ ತಿಳಿಯಬೇಕು ಮತ್ತು ಆತ ಕೂಡ ಸಹಕಾರ ಕ್ಷೇತ್ರದೊಳಗೆ ಬೆರೆಯಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಸವಣೂರಿನ ಶಿಲ್ಫಿ, ಹಿರಿಯ ಸಹಕಾರಿ ಧುರೀಣ ಕೆ. ಸೀತಾರಾಮ ರೈ ಅವರನ್ನು ಸಹಾಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ 50 ವರ್ಷಗಳ ಸೇವೆಯನ್ನ ಗುರುತಿಸಿ ಸನ್ಮಾನಿಸಲಾಯಿತು. ಇವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧಿಕಾರಿಯಾಗಿ ಸಹಕಾರಿ ಕ್ಷೇತ್ರಕ್ಕೆ ಹೆಚ್ಚೆ ಇರಿಸಿ, 15 ವರ್ಷಗಳ ಕಾಲ ಬ್ಯಾಂಕ್‍ಲ್ಲಿ ಸೇವೆಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಕಳೆದ 35 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ವಿವಿಧ ಹುದ್ಧೆಗಳನ್ನು ನಿರ್ವಹಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮೆರವಣಿಗಾ ಉದ್ಘಾಟನೆಯನ್ನ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್ ಅಂಗಾರ ನೆರವೇರಿಸಿದರು, ಪುತ್ತೂರು ಶಾಸಕ ಸಂಜೀವ ಮಠಂದೂರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿದರು, ಮಂಗಳೂರಿನ ಸಹಕಾರಿ ಯೂನಿಯನ್‍ನ ಅದ್ಯಕ್ಷ ಹರೀಶ್ ಆಚಾರ್ಯ , ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ಬಾಲ್ಯೋಟ್ಟು ಕಾರ್ಯಕ್ರಮದ ಅದ್ಯಕ್ಷತೆಯನ್ನ ವಹಿಸಿದ್ದು ಮತ್ತಿತ್ತರರು ಉಪಸ್ಧಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು