Recent Posts

Sunday, January 19, 2025
ಸುದ್ದಿ

PFI ಸಮಾವೇಶದಲ್ಲಿ ಉರಿಲಿಂಗಪೆದ್ದಿ ಶ್ರೀ ಮತ್ತು ಬಿ.ಟಿ. ಲಲಿತಾ ನಾಯಕ್ ನೀಡಿದ್ದ ಹೇಳಿಕೆಗೆ ವಜ್ರದೇಹಿ ಶ್ರೀ ಗರಂ | ರಾಘವೇಶ್ವರ ಶ್ರೀ ವಿಶ್ವಮಾನ್ಯ.

ಮಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಿ.ಎಫ್.ಐ. ಸಮಾವೇಶದಲ್ಲಿ ಮಾತನಾಡಿ ದೇಶದ ವಿರುದ್ಧ ಹೇಳಿಕೆ ನೀಡಿದ ಜ್ಞಾನ ಪ್ರಕಾಶ ಸ್ವಾಮೀಜಿ ಇತಿಹಾಸ ತಿರುಚಿದ್ದಾರೆ.  ಗಾಂಧೀಜಿ ಮತ್ತು ಸುಭಾಶ್ ಚಂದ್ರಬೋಸ್, ಭಗತ್ ಸಿಂಗ್ ಇಲ್ಲದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ದೊರಕ್ಕುತ್ತಿರಲಿಲ್ಲ. ಉರಿಲಿಂಗಪೆದ್ದಿ ಪೆದ್ದು ಪೆದ್ದು ಹೇಳಿಕೆ ನೀಡುವ ಮೊದಲು ನಾಲಿಗೆ ಬಿಗಿ ಹಿಡಿಯಲಿ, ನಾವು ಭಾರತದಿಂದ ಕೊಲೆಕಟುಕರನ್ನು ಓಡಿಸಿದ್ದೇವೆ, ಈಗ ಪಿ.ಎಫ್.ಐ. ಅದೇ ದಾರಿಯಲ್ಲಿ ಸಾಗುತ್ತಿದ್ದರೆ ಮುಂದೊಂದು ದಿನ ನಿಮ್ಮನ್ನು ಓಡಿಸುತ್ತೇವೆ ಎಂದು ಹೇಳಿದ್ದಾರೆ.

.                              ಬಿ.ಟಿ. ಲಲಿತಾ ನಾಯಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಜ್ರದೇಹಿ ಶ್ರೀ, ಮೊದಲು ಲಲಿತಾ ನಾಯಕ್ ರಾಘವೇಶ್ವರ ಶ್ರೀ ಪಾದಮುಟ್ಟಿ ನಮಸ್ಕರಿಸಲಿ ಇನ್ನಾದರೂ ಒಳ್ಳೆ ಬುದ್ಧಿ ಬರಬಹುದು, ರಾಘವೇಶ್ವರ ಶ್ರೀಗಳ ಗೋಸಂರಕ್ಷಣೆಯ ಕಾರ್ಯಕ್ಕೆ ದೇಶ ವಿದೇಶಗಳಲ್ಲಿ ಮಣ್ಣಣೆ ಲಭಿಸಿದೆ, ಅವರು ವಿಶ್ವಮಾನ್ಯರು. ಅವರ ಗೋ ಪ್ರೇಮಕ್ಕೆ ನಾವೆಲ್ಲರೂ ಅವರ ಜೊತೆಗಿದ್ದೇವೆ, ಮತ್ತು ಲಿಲಿತಾ ನಾಯಕ್ ಗೋವಿನ ಹಾಲು ಕುಡಿಯುತ್ತಾರೋ ನಾಯಿ ಹಾಲು ಕುಡಿಯುತ್ತಾರೋ ಎಂದು ಹೇಳಲಿ. ರಾಘವೇಶ್ವರ ಶ್ರೀಗಳ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ, ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response