Recent Posts

Monday, January 20, 2025
ರಾಜಕೀಯಸುದ್ದಿ

ಮೊದಲು ರೈತರ ಸಮಸ್ಯೆ ಬಗೆಹರಿಸಿ, ರಾಜ್ಯ ಸರ್ಕಾರಕ್ಕೆ ಬಿಎಸ್​ವೈ ಎಚ್ಚರಿಕೆ – ಕಹಳೆ ನ್ಯೂಸ್

ಬೆಂಗಳೂರು:  ಸಿಎಂ ಆದಷ್ಟು ಬೇಗ ರೈತರಿಗೆ ಕಬ್ಬಿನ ಬಾಕಿ ಕೊಡಿಸುವ ತೀರ್ಮಾನ ಮತ್ತು ಕಬ್ಬಿಗೆ ಬೆಂಬಲ ಬೆಲೆ ನೀಡದೇ ಇದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಮೊದಲು ರೈತರ ಸಮಸ್ಯೆ ಬಗೆಹರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದುವೇಳೆ ಸಿಎಂ ಆದಷ್ಟು ಬೇಗ ರೈತರಿಗೆ ಕಬ್ಬಿನ ಬಾಕಿ ಕೊಡಿಸುವ ತೀರ್ಮಾನ ಮತ್ತು ಕಬ್ಬಿಗೆ ಬೆಂಬಲ ಬೆಲೆ ನೀಡದೇ ಇದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಮೊದಲು ರೈತರ ಸಮಸ್ಯೆ ಬಗೆಹರಿಸಿ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಬ್ಬಿನ ಕಾರ್ಖಾನೆ ಮಾಲೀಕರು 90 ಕೋಟಿ ಕಬ್ಬಿನ ಹಣ ಬಾಕಿ ಇಟ್ಟುಕೊಂಡಿದ್ದಾರೆ. ಕಾರ್ಖಾನೆಯವರು ಯಾವ ಪಕ್ಷದವರಾದರೆ ಏನು? ರೈತರು ಹೋರಾಟ ನಡೆಸುತ್ತಿದ್ದರೆ ಅವರನ್ನು ಯಾವ ಪಕ್ಷ ಎಂದು ಸಿಎಂ ಕೇಳುತ್ತಾರೆ? ಬೇರೆ ರಾಜಕೀಯ ಪಕ್ಷಗಳು ರೈತರಿಗೆ ಬೆಂಬಲ ಸೂಚಿಸುವುದು ಅಪರಾಧವೇನು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರೇವಣ್ಣ ಅವರು ನೋಟನ್ನು ಪ್ರಿಂಟ್​ ಮಾಡುವ ಮಷಿನ್ ಇಟ್ಟುಕೊಂಡಿದ್ದೇವಾ ಎನ್ನುತ್ತಾರೆ. ಆದರೆ ನಾವೇನು ಅವರಿಗೆ ಮಷಿನ್ ಇಟ್ಕೊಂಡಿದ್ದೀರಿ ಎಂದು ಹೇಳಿದ್ದೇವಾ? ಸಾಲಮನ್ನಾ ಮಾಡುತ್ತೇವೆ ಅಂತ ಬೊಬ್ಬೆ ಹೊಡೆದವರು ನೀವೇ ತಾನೆ? ಆದರೆ ಈಗ ಸಾಲಮನ್ನಾ ಮಾಡದೆ ಬ್ಯಾಂಕ್​ಗಳಿಂದ ನೋಟಿಸ್​ ಹೋಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಮಸ್ಯೆ ಕುರಿತು ಬಿಜೆಪಿ ನಾಳೆ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದೇವೆ ಎಂದ ಅವರು, ನಿನ್ನೆ ರೈತ ಮಹಿಳೆಗೆ ಎಲ್ಲಿ ಮಲಗಿದ್ದೆ ಎಂದು ಹೇಳುವ ಮೂಲಕ ರಾಜ್ಯದ ಮಹಿಳೆಯರಿಗೆ ಸಿಎಂ ಅವಮಾನ ಮಾಡಿದ್ದಾರೆ. ಮೊದಲು ಅವರಿಗೆ ಕ್ಷಮೆ ಕೇಳಬೇಕು ಎಂದರು.