Saturday, November 23, 2024
ಸುದ್ದಿ

ರಮನಾಥ್ ರೈ ಗೆ ಅಕ್ರಮ ಮಾಡಿಯೇ ಗೊತ್ತು: ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪ – ಕಹಳೆ ನ್ಯೂಸ್

ಮಂಗಳೂರು: ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ತಲೆಎತ್ತಲು ರಮಾನಾಥ ರೈ ಅವರೇ ಕಾರಣ, ಕಾಂಗ್ರೇಸ್ ಕಛೇರಿಯನ್ನು ನಿಯಮಮೀರಿ ಕಟ್ಟಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪ ವ್ಯಕ್ತಪಡಿಸಿದ್ದಾರೆ.

ಅವರು ಬಿಸಿರೋಡಿನ ಪಕ್ಷದ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಾಮಾನ್ಯ ರು ಮನೆ ಕಟ್ಟಲು ಒಂದು ಕಾನೂನು ಪ್ರಭಾವಿಗಳು ಮತ್ತು ರೈ ಅವರು ಕಟ್ಟಡ ಕಟ್ಟಲು ಒಂದು ಕಾನೂನೇ ಎಂದು ಪ್ರಶ್ನಿಸಿದ ಅವರು ಕಾನೂನಿಗೆ ವಂಚನೆ ಮಾಡಿದ್ದಾರೆ. ಸರಕಾರಕ್ಕೆ ಎರಡು ಪಟ್ಟು ಕಟ್ಟಬೇಕಾದ ತೆರಿಗೆಯನ್ನು ಕಟ್ಟದೆ ಸಿಂಗಲ್, ಟ್ಯಾಕ್ಸ್ ಕಟ್ಟಿ , ಸಲ್ಲಿಸಬೇಕಾದ ತೆರಿಗೆ ಕಟ್ಟದೆ ವಂಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೇಸ್ ಕಚೇರಿಯಲ್ಲಿ ಬಾಡಿಗೆಗೆ ನೀಡಿದ ಎ.ಟಿ.ಎಂ.ಕೊಠಡಿಗೆ ಡೋರ್ ನಂ.ಇಲ್ಲ, ಒಂದು ವೇಳೆ ದರೋಡೆಯಾದರೆ ಯಾರು ಕಾರಣಾರಾಗುತ್ತಾರೆ ಇಲ್ಲಿ ಬ್ಯಾಂಕ್ ವ್ಯವಸ್ಥೆ ಗೆ ವಂಚನೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೈ ಅವರಿಗೆ ಅಕ್ರಮ ಮಾಡಿಯೇ ಗೊತ್ತಿರುವುದು ಎಂದು ಅವರು ಹೇಳಿದರು. ಬಂಟ್ವಾಳ ಪುರಸಭೆಯಲ್ಲಿ ಎಲ್ಲವೂ ಕಾನೂನಿನ ವಿರುದ್ದವಾಗಿಯೇ ಕೆಲಸಗಳು ನಡೆಯುತ್ತಿವೆ, ನಿಯಮಮೀರಿ ಕಟ್ಟಡಗಳಿಗೆ ಪರವಾನಿಗೆ ನೀಡಲಾಗುತ್ತಿದೆ ಇದರಲ್ಲರ ತನಿಖೆಯಾಗಬೇಕಾಗಿದೆ ಎಂದರು. ಪುರಸಭೆಯನ್ನು ಕಾಂಗ್ರೇಸ್‌ನವರು ಭ್ರಷ್ಟ ಪುರಸಭೆಯನ್ನಾಗಿ ಮಾರ್ಪಾಡು ಮಾಡಿದೆ ಇದಕ್ಕೆ ಮಾಜಿ ಸಚಿವರೇ ಕಾರಣ ಎಂದು ಆರೋಪ ವ್ಯಕ್ತಪಡಿಸಿದ ಅವರು ಜಿಲ್ಲಾಧಿಕಾರಿ ಸ್ವತಃ ಬೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಿದರು.

ಬರೋಡ ಬ್ಯಾಂಕ್ ನೊಂದಿಗೆ ವಿಜಯ ಬ್ಯಾಂಕ್ ವಿಲೀನ ವಾದರೆ ಅವರ ಕಾಂಗ್ರೇಸ್ ಕಚೇರಿಯಲ್ಲಿ ಬಾಡಿಗೆ ಇರುವ ಬ್ಯಾಂಕ್ ನ ಬಾಡಿಗೆ ಹೋಗುತ್ತದೆ ಎಂಬ ಕಾರಣಕ್ಕಾಗಿ ಅವರು ಮಾತನಾಡುತ್ತಾರೆ ವಿನಃ ಬ್ಯಾಂಕ್ ಮೇಲಿನ ಪ್ರೀತಿ ಯಿಂದಲ್ಲ ಎಂದು ಅವರು ಹೇಳಿದರು.
ಹರಿಕ್ರಷ್ಣರು ಬ್ರಾಹ್ಮಣ ಎಂಬ ರೈ ಅರೋಪಕ್ಕೆ ನೀವು ಉಳ್ಳಾಲ ಸಂಸ್ಕೃತಿಗೆ ಹೋಗಿದ್ದೀರಿ ಅದರ ಪರಿಣಾಮ ಏನಾಗುತ್ತದೆ ಎಂದು ಮುಂದೆ ನೋಡಿ.

ಪುರಸಭೆಯಲ್ಲಿ ದುಡ್ಡು ನೀಡಿದರೆ ಯಾವ ಸರ್ಟಿಫಿಕೇಟ್ ಸಿಗುತ್ತದೆ , ಹಾಗಾಗಿ ಜಿಲ್ಲಾಧಿಕಾರಿ ಇಲ್ಲಿನ ಅಕ್ರಮಗಳ ತನಿಖೆ ಮಾಡಿ ಸಾರ್ವಜನಿಕ ರಿಗೆ ನ್ಯಾಯ ಒದಗಿಸಲು ಆಗ್ರಹಿಸಿದರು. ಅಕ್ರಮ ವ್ಯವಹಾರಗಳಿಗೆ ವಿರೋದ ಬಳಿಕವೂ ಮುಂದಿನ ದಿನಗಳಲ್ಲಿ ಅಕ್ರಮ ಗಳು ನಡೆದರೆ ಅದಕ್ಕೆ ಜಿಲ್ಲಾಧಿಕಾರಿ ನೇರ ಹೊಣೆಯಾಗುತ್ತಾರೆ ಎಂದು ಹರಿಕ್ರಷ್ಣ ಬಂಟ್ವಾಳ ಹೇಳಿದರು.

ಇಂದಿರಾ ಕ್ಯಾಂಟೀನ್ ಗೆ ನಮ್ಮ ವಿರೋಧ ವಿಲ್ಲ ಕಾನೂನು ಮೀರಿ ಅಕ್ರಮವಾಗಿ ರಸ್ತೆಯಲ್ಲಿ ಕಂಪೌಂಡ್ ಕಟ್ಟಲು ಮಾತ್ರ ನಮ್ಮ ವಿರೋಧ ವಿದೆ ಎಂದು ಪುರಸಭಾ ಸದಸ್ಯ ಗೋವಿಂದ ಪ್ರಭು ಹೇಳಿದರು.

ಈ ಸಂಧರ್ಭದಲ್ಲಿ ಶಾಸಕ ರಾಜೇಶ್ ನಾಯಕ್ , ಬಂಟ್ವಾಳ ಬಿಜೆಪಿ ಅದ್ಯಕ್ಷ ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯ ರಾದ ಗೋವಿಂದ ಪ್ರಭು, ಎಸ್.ಸಿ.ಎಸ್. ಟಿ.ಮೋರ್ಚಾ ದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ , ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.