Recent Posts

Sunday, January 19, 2025
ರಾಜಕೀಯ

ಕಬ್ಬು ಬೆಳೆಗಾರರ ಕುರಿತು ಸಿಎಂ ಹೇಳಿಕೆ ವಿರುದ್ಧ ಕಿಡಿ ಕಾರಿದ ವೇದವ್ಯಾಸ ಕಾಮತ್ – ಕಹಳೆ ನ್ಯೂಸ್

ಮಂಗಳೂರು: ಕಬ್ಬು ಬೆಳೆಗಾರರ ಕುರಿತು ಮುಖ್ಯಮಂತ್ರಿಯವರ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಕಿಡಿ ಕಾರಿದರು.
ರಾಜ್ಯದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ರೈತರ ಸಮಸ್ಯೆ ಬಗೆಹರಿಸುವುದು ಬಿಟ್ಟು ನೊಂದ ರೈತರಿಗೆ ಬರೆ ಎಳೆಯುತ್ತಿರುವುದು ನಿಜಕ್ಕೂ ಖಂಡನೀಯ ಘಟನೆಯಾಗಿದೆ. ಚುನಾವಣೆಯಲ್ಲಿ ತನಗೆ ಮತ ನೀಡಿಲ್ಲ ಎನ್ನುವ ಕೋಪವನ್ನು ಅಧಿಕಾರ ಹಿಡಿದ ಮೇಲೆ ಕುಮಾರಸ್ವಾಮಿಯವರು ಜನ ಸಾಮಾನ್ಯರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಕುಮಾರಸ್ವಾಮಿಯವರು ಕೇವಲ ಅವರ ಪಕ್ಷದ ಮತದಾರರಿಗೆ ಮಾತ್ರ ಮುಖ್ಯಮಂತ್ರಿಯೇ ಎಂದು ಪ್ರಶ್ನಿಸಿದ್ದಾರೆ.
ಇಂತಹ ದ್ವೇಷ ರಾಜಕಾರಣ ಘನ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ. ರೈತ ತಾನು ಕಹಿ ನುಂಗಿ ರಾಜ್ಯಕ್ಕೆ ಸಿಹಿ ನೀಡುತಿದ್ದಾರೆ. ಒಂದು ಕ್ಷಣ ಅವರ ಸ್ಥಾನದಲ್ಲಿ ನಿಂತು ಅವರ ಪರಿಸ್ಥಿತಿಯನ್ನು ಅವಲೋಕಿಸಿದರೆ ಮುಖ್ಯಮಂತ್ರಿಗಳು ಇಂತಹ ಮಾತನ್ನು ಆಡುತ್ತಿರಲಿಲ್ಲ. ಅದಲ್ಲದೆ ಒಬ್ಬ ರೈತ ಸ್ತ್ರೀಯ ಬಗ್ಗೆ ಮಾನಹಾನಿಕರವಾಗಿ, ರೈತರ ಬಗ್ಗೆ ಅಮಾನವೀಯವಾಗಿ ಮಾತನಾಡಿದ ಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸುತ್ತೇನೆ ವೇದವ್ಯಾಸ ಹೇಳಿದರು.

ಜಾಹೀರಾತು

ಜಾಹೀರಾತು
ಜಾಹೀರಾತು