ಮಂಗಳೂರು: ಇದು ಮಂಗಳೂರಿನ ಕೆ .ಪಿ .ಟಿ ವೃತ್ತ ಈ ವೃತ್ತದಿಂದ ಮಂಗಳೂರು ನಗರದ ವಿವಿಧ ಭಾಗಗಳಿಗೆ ಸಂಪರ್ಕಿಸುವ ರಸ್ತೆ. ಈ ವೃತ್ತದ ಮೂಲಕ ಬೆಂಗಳೂರು ಮತ್ತು ಕೇರಳಕ್ಕೆ ಇನ್ನೊಂದು ಬದಿಯ ರಸ್ತೆ ನೇರವಾಗಿ ಉಡುಪಿ, ಉತ್ತರ ಕನ್ನಡ, ಗೋವಾ ರಾಜ್ಯ ಸಂಪರ್ಕ ಕಲ್ಪಿಸುತ್ತದೆ ಇನ್ನೊಂದು ಬದಿಯ ರಸ್ತೆ ನೇರವಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತದೆ.
ವಿಮಾನ ನಿಲ್ದಾಣಕ್ಕೆ ಸಾಗುವ ರಸ್ತೆ ಮಧ್ಯೆ ರಸ್ತೆ ಉಬ್ಬುಗಳನ್ನು ಹಾಕಲಾಗಿದೆ ಏಕೆಂದರೆ ಕೆಪಿಟಿ ಜನನಿಬಿಡ ಮತ್ತು ವಾಹನ ನಿಬಿಡ ವೃತ್ತ ವಾದುದರಿಂದ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರೋದರಿಂದ ವಾಹನಗಳ ವೇಗದ ನಿಯಂತ್ರಣಕಾಗಿ ಈ ರಸ್ತೆ ಉಬ್ಬುಗಳನ್ನ ಮಂಗಳೂರು ಮಹಾ ನಗರ ಪಾಲಿಕೆ ಹಾಕಿಸಿದೆ, ಆದರೆ ಎರಡು ವರ್ಷದಿಂದ ಈ ರಸ್ತೆಯ ಉಬ್ಬುಗಳ ಡಾಮರೀಕರಣ ಕಿತ್ತು ಹೋಗಿದ್ದು ರಸ್ತೆ ಉದ್ದಕ್ಕೂ ಗುಂಡಿ ಬಿದ್ದ ಪರಿಣಾಮ ದಿನನಿತ್ಯ ಇಲ್ಲಿ ಅಪಘಾತಗಳು ಸಂಭವಿಸುತ್ತಿದೆ ಎಂದು ಸ್ಥಳೀಯ ರಿಕ್ಷಾ ಚಾಲಕರು ದೂರಿದ್ದಾರೆ.
ರಾತ್ರಿ ಹೊತ್ತು ವಿದ್ಯಾರ್ಥಿಗಳು ಮತ್ತು ಯುವಕರು ಮದ್ಯ ಸೇವಿಸಿ ವೇಗವಾಗಿ ಈ ರಸ್ತೆಯಲ್ಲಿ ಗುಂಡಿ ಇರುವುದನ್ನು ಗಮನಿಸದೆ ಅಪಘಾತಗಳ ಆದ ಉದಾಹರಣೆಗಳು ನಡೆದಿದೆ ಎರಡು ವರ್ಷ ಕಳೆದರೂ ಈ ಹುಬ್ಬುಗಳ ಸರಿಯಾಗದ ಹಿನ್ನೆಲೆಯಲ್ಲಿ ಸ್ಥಳೀಯ ಆಟೋ ಚಾಲಕರು ಮತ್ತು ಸ್ಥಳೀಯರು ಸೇರಿಕೊಂಡು ಪಾಲಿಕೆಗೆ, ಜನಪ್ರತಿನಿಧಿಗಳಿಗೆ ದೂರು ನೀಡಿದರು ನೋಡಿಯೂ ನೋಡದಂತೆ ಮಾಡುತ್ತಿದ್ದು ದಿನ ಶಾಸಕರಾಗಲಿ, ಸಚಿವರಾಗಲಿ, ರಾಜ್ಯದ ಮುಖ್ಯಮಂತ್ರಿ ಇದೆ ರಸ್ತೆ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗ್ತಾರೆ ಆದರೆ ಈ ಗುಂಡಿ ಮುಚ್ಚುವ ಕೆಲಸ ಇನ್ನು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.