Recent Posts

Sunday, January 19, 2025
ಸುದ್ದಿ

ಡಬ್ಲ್ಯೂಆರ್‌ಐಸಿಯ ಉದ್ದೇಶ ಜನರಲ್ಲಿ ಉಪಕರಣಗಳ ದುರಸ್ಥಿ ಕೌಶಲ್ಯ ಹೆಚ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿದೆ: ಡಾ ಇಂದು ಎ ಜೋರ್ಜ – ಕಹಳೆ ನ್ಯೂಸ್

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗ ಐಕ್ಯೂಎಸಿ ಕಾರ‍್ಯಕ್ರಮದಡಿಯಲ್ಲಿ ಮುಂಬೈನ ವೆಸ್ಟರ್ನ ರಿಜಿನಲ್ ಇನ್ಸು್ಟ್ರಮೆನ್ಟೇಶನ್ ಸೆಂಟರ್(ಡಬ್ಲ್ಯೂಆರ್‌ಐಸಿ) ಸಹಯೋಗದಲ್ಲಿ ಐದು ದಿನಗಳ ಕಾಲ ಜರುಗಿದ ರಾಷ್ಟ್ರ ಮಟ್ಟದ ಇನ್ಸು್ಟ್ರಮೆನ್ಟೇಶನ್ ಟೆಕ್ನಿಕ್ಸ್, ಮೈನ್ಟೆನೇನ್ಸ್, ಸರ್ವೀಸಿಂಗ್ ಆಫ್ ಅನಾಲಿಟಿಕಲ್ ಆ್ಯಂಡ್ ಲಾಬೋರೋಟರಿ ಇನ್ಸು್ಟ್ರಮೆನ್ಟ್್ಸ ಕಾರ‍್ಯಗಾರದ ಸಮಾರೋಪ ಸಮಾರಂಭ, ಕಾಲೇಜಿನ ಕುವೆಂಪು ಸಭಾಭವನದಲ್ಲಿ ಸೋಮವಾದ ಜರುಗಿತು.

ಕಾರ‍್ಯಕ್ರಮದ ಸಂಯೋಜಕ ಡಾ ಪಿ.ವಿ ಗೌಡ ಪ್ರಸ್ತಾವಿಕವಾಗಿ ಮಾತನಾಡಿ, ಇಂತಹ ಕಾರ‍್ಯಗಾರಗಳು ಶಿಕ್ಷಕ, ವಿದ್ಯಾರ್ಥಿ ಸಮುದಾಯದಲ್ಲಿ ಉಪಕರಣಗಳ ದುರಸ್ಥಿಯೆಡೆಗಿನ ಜ್ಞಾನ ವೃದ್ಧಿಸಲು ಸಹಕಾರಿಯಾಗಿದ್ದು, ಐದು ದಿನದ ಕಾರ‍್ಯಗಾರದಲ್ಲಿ ಸುಮಾರು ಆರು ಲಕ್ಷದಷ್ಟು ಮೌಲ್ಯದ ಉಪಕರಣಗಳ ದುರಸ್ಥಿ ಸಾಧ್ಯವಾಯಿತು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮುಂಬೈನ ವೆಸ್ಟರ್ನ ರಿಜಿನಲ್ ಇನ್ಸು್ಟ್ರಮೆನ್ಟೇಶನ್ ಸೆಂಟರ್‌ನ ನಿರ್ದೇಶಕಿ ಡಾ ಇಂದು ಎ ಜೋರ್ಜ, ಡಬ್ಲ್ಯೂಆರ್‌ಐಸಿಯ ಮೂಲ ಉದ್ದೇಶ ಜನರಲ್ಲಿ ಉಪಕರಣಗಳ ದುರಸ್ಥಿ ಕೌಶಲ್ಯವನ್ನು ಹೆಚ್ಚಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವುದಾಗಿದೆ. ಆ ಮೂಲಕ ಸಂಸ್ಥೆಗಳ ದುರಸ್ಥಿವ್ಯಯವನ್ನು ನಿಯಂತ್ರಿಸಬಹುದು. ಅಲ್ಲದೆ, ಪ್ರಯೋಗಾಲಯದಲ್ಲಿ ಕಾರ‍್ಯನಿರ್ವಹಿಸುವ ಪ್ರತಿಯೊಬ್ಬ ಶಿಕ್ಷಕನಿಗೂ, ವಿದ್ಯಾರ್ಥಿಗೂ, ಹಾಗೂ ಪ್ರಯೋಗಾಲಯ ಸಹಾಯಕನಿಗೆ ಉಪಕರಣಗಳ ನಿರ್ವಹಣೆಯ ಕನಿಷ್ಟ ಜ್ಞಾನ ಅತ್ಯವಶ್ಯಕ. ಉಪಕರಣಗಳ ನ್ಯೂನತೆಗಳನ್ನು ಆರಂಭದಲ್ಲಿ ಗುರುತಿಸುವುದರಿಂದ, ಮುಂದೆ ತಗುಲಬಹುದಾದ ದೊಡ್ಡ ಮೊತ್ತದ ಖರ್ಚನ್ನು ಪ್ರಾರಂಭದಲ್ಲೆ ತಡೆಗಟ್ಟಬಹುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಚರ‍್ಯ ಡಾ ಕುರಿಯನ್, ನಾವಿಂದು ಯೂಸ್ ಆ್ಯಂಡ್ ತ್ರೋ ಜಮಾನದಲ್ಲಿದ್ದು, ಪ್ರತಿಯೊಂದು ವಸ್ತುಗಳನ್ನು ಬಳಸಿದ ನಂತರ ಎಸೆಯುವ ಮನಸ್ಥಿತಿಯಿಂದ ಹೊರಬಂದು ಪುರ್ನಬಳಕೆ ಮಾಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಯಾವುದೇ ಉಪಕರಣವನ್ನು ಅದೊಂದು ಕೇವಲ ಉಪಕರಣವೆಂದು ಭಾವಿಸದೆ, ಅದು ನಮ್ಮ ಸಹಕ್ಕಾರಕ್ಕಿರುವ ವಸ್ತು ಎಂದು ಭಾವಿಸಿ ಉಪಯೋಗಿಸಿದರೆ ಒಳಿತು ಎಂದು ತಿಳಿಸಿದರು.

ಕಾರ‍್ಯಕ್ರಮದಲ್ಲಿ ಎಸ್‌ಡಿಎಂ, ಮಹಾವೀರ, ಭುವನೇಂದ್ರ, ಆ್ಯಗ್ನೆಸ್, ಭಂಡಾರರ‍್ಸ್ ಕಾಲೇಜುಗಳ ಹಾಗೂ ಪಿಲಿಕುಳ ನಿಸರ್ಗಧಾಮದ 63 ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ‍್ಯಕ್ರಮವನ್ನು ಉಪನ್ಯಾಸಕಿ ಪೂಜಾಶ್ರೀ ನಿರೂಪಿಸಿ, ಮೀನಾಕ್ಷಿ ವಂದಿಸಿದರು. ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ದೀಪ್ತಿ ಹಾಗೂ ಆಳ್ವಾಸ್ ಆರ್ಯುವೇದ ಕಾಲೇಜಿನ ವಿದ್ಯಾರ್ಥಿ ಅರುಣದೀಪ್ ಎಂ ಕಾರ‍್ಯಗಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಕಾರ‍್ಯಕ್ರಮದಲ್ಲಿ ಅರವಿಂದ್ ರಾವ್, ಸಂಪನ್ಮೂಲ ವ್ಯಕ್ತಿ ಎನ್‌ಎನ್ ರಾವ್, ವಿಭಾಗದ ಮುಖ್ಯಸ್ಥ ಪ್ರೋ ಪುಷ್ಪೇಂದ್ರ ಉಪಸ್ಥಿತರಿದ್ಧರು.