Recent Posts

Monday, January 20, 2025
ಸುದ್ದಿ

ಅಯ್ಯಪ್ಪ ಭಕ್ತರ ಮೇಲೆ ಕೇರಳ ಸರ್ಕಾರದ ದೌರ್ಜನ್ಯವನ್ನು ಖಂಡಿಸುತ್ತೇವೆ: ಶಾಸಕ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು: ಶಬರಿಮಲೆ ಸಂರಕ್ಷಣಾ ಕ್ರಿಯಾ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಯ್ಯಪ್ಪ ಭಕ್ತರ ಮೇಲೆ ಕೇರಳ ಸರಕಾರ ಪೊಲೀಸರನ್ನು ಬಿಟ್ಟು ದೌರ್ಜನ್ಯ ಮಾಡುತ್ತಿದ್ದು ಅವರ ಮೇಲೆ ಲಾಠಿ ಪ್ರಹಾರ ಮಾಡುವುದನ್ನ ಖಂಡಿಸುತ್ತೇವೆ ಎಂದು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ಶಾಸಕ ಡಾಕ್ಟರ್ ಭರತ್ ಶೆಟ್ಟಿ ಶಬರಿಮಲೆಯಲ್ಲಿ ಹಣದ ರೂಪದಲ್ಲಿ ಕಾಣಿಕೆ ಹುಂಡಿಯಲ್ಲಿ ಕಾಣಿಕೆ ಆಗಬಾರದೆಂದು ಕರೆ ಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಕ್ತಾದಿಗಳು ಶಬರಿಮಲೆಯಲ್ಲಿ ಕಾಣಿಕೆಯ ರೂಪದಲ್ಲಿ ಹಾಕಿದ ಹಣದಿಂದ ಕೇರಳ ಸರಕಾರ ನಡೆಯುತ್ತಿದೆ ಆದರೆ ಕೇರಳ ಸರಕಾರ ಭಕ್ತಾದಿಗಳ ಮೇಲೆಯೇ ಲಾಠಿ ಪ್ರಹಾರ ಮಾಡುವುದು ಖಂಡನಾರ್ಹ ಎಂದು ಹೇಳಿದರು.

ನೀವು ಭಕ್ತರನ್ನು ಭಕ್ತರನ್ನ ಮಟ್ಟ ಹಾಕಲು ಹದಿನೈದು ಸಾವಿರ ಪೊಲೀಸರು ನಿಯೋಜಿಸಿದ್ದೀರಿ ,ನಾವೆಲ್ಲರೂ ಸೇರಿ ಲಕ್ಷಾಂತರ ಮಂದಿ ಶಬರಿಮಲೆಗೆ ಬರುತ್ತೇವೆ ಸಾಧ್ಯವಾದರೆ ನಮ್ಮನ್ನು ತಡೆಯಿರಿ ಎಂದು ಸವಾಲುಹಾಕಿದ್ರು.