Recent Posts

Monday, January 20, 2025
ಸುದ್ದಿ

ಪುರಸಭಾ ವ್ಯಾಪ್ತಿಯ ಅಕ್ರಮ ಕಟ್ಟಡಗಳಿಗೆ ಅನುಮತಿ ನೀಡಲು ರೈ ಕಾರಣ ಎಂಬ ಹೇಳಿಕೆ ಖಂಡನೀಯ: ಸದಾಶಿವ ಬಂಗೇರ – ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಅಕ್ರಮ ಕಟ್ಟಡಗಳಿಗೆ ಅನುಮತಿ ನೀಡಲು ರಮಾನಾಥ ರೈ ಅವರು ಕಾರಣ ಎಂಬ ಹೇಳಿಕೆ ಖಂಡನೀಯ ಎಂದು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.

ಅಕ್ರಮ ಚಟುವಟಿಕೆ ಗಳಿಗೆ ಪ್ರೋತ್ಸಾಹ ನೀಡುವವರು ಕೆಲವು ಬಿಜೆಪಿಗರು, ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಆಡಳಿತ ಇರುವಾಗ ಪ್ರಾಧಿಕಾರದ ಅನುಮತಿ ಪಡೆಯದೆ ಕಾನೂನು ಬಾಹಿರ ವಾಗಿ ಅನೇಕ ಕಟ್ಟಡಗಳಿಗೆ ಬೇಕಾಬಿಟ್ಟಿ ಅನುಮತಿ ನೀಡಿರುವುದನ್ನು ನೋಡಿದರೆ ಬಂಟ್ವಾಳ್ ರಿಗೆ ದಿಗ್ಬ್ರಮೆಯಾಗಬಹುದು ಎಂದು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಅವರ ಇತ್ತೀಚಿನ ಹೇಳಿ ಕೆಗಳನ್ನು ನೋಡಿದರೆ ಮಾನಸಿಕ ರಾಜಕೀಯ ಸ್ಥಿಮಿತ ಕೈಕೊಂಡ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ ,ಮತ್ತು ಇತ್ತೀಚಿನ ಭಾಷಣವನ್ನು ನೋಡಿದರೆ ಇವರು ಬಿಜೆಪಿ ಪಕ್ಷದಲ್ಲಿ ಜಾಸ್ತಿ ಸಮಯ ಇರುವುದಿಲ್ಲ ಎಂದು ಭಾಸವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ದ ರಾಜಕೀಯ ಇತಿಹಾಸದಲ್ಲಿ ಬಿ.ರಮಾನಾಥ ರೈ ಯವರು ಅವರು ತಾಲೂಕಿಗೆ ನೀಡಿದ ಅಭಿವೃದ್ಧಿ ಯ ಕೊಡುಗೆ ಇನ್ಯಾರು ನೀಡಲು ಸಾಧ್ಯವಿಲ್ಲ ಇವರ ಬಗ್ಗೆ ಹೇಳಿಕೆ ಗಳನ್ನು ನೀಡುವಾಗ ಯೋಗ್ಯತೆ ತಕ್ಕಂತೆ ಹೇಳಿಕೆ ನೀಡುವುದು ಒಳಿತು ಎಂದು ಅವರು ಪ್ರಕಟನೆಯ ಲ್ಲಿ ತಿಳಿಸಿದ್ದಾರೆ.