ತುಮಕೂರು: ನಗರದ 3ನೇ ವಾರ್ಡ್‍ನ ಗುಡ್ಡದಹಟ್ಟಿ ಬಳಿ ಪೊದೆಯೊಂದರಲ್ಲಿ ಎರಡು ಮೂರು ದಿನಗಳ ಹಿಂದೆ ಜನಿಸಿದ್ದ ನವಜಾತ ಹೆಣ್ಣು ಶಿಶುವನ್ನು ಕರುಣೆಯಿಲ್ಲದ ತಾಯಿ ಕರುಳ ಬಳ್ಳಿಯನ್ನೇ ಕುತ್ತಿಗೆಯವರೆಗೂ ಮಣ್ಣಿನಲ್ಲಿ ಹೂತಿದ್ದಾಳೆ.
ಇಂದು ಬೆಳಗ್ಗೆ ನಾಗಜ್ಜಿ ಗುಡಿಸಲಿನ ನಿವಾಸಿ ಕೆರೆಯ ಕಡೆಗೆ ಹೋಗುತ್ತಿರುವಾಗ ಮಗು ಅಳುತ್ತಿರುವ ಶಬ್ಧ ಕೇಳಿ ಹತ್ತಿರ ಹೋಗಿ ನೋಡಿದಾಗ ಮುದ್ದಾದ ಪುಟ್ಟ ಕಂದಮ್ಮ ಕಣ್ಣಿಗೆ ಕಾಣಿಸಿದೆ. ತಕ್ಷಣವೇ ಮಗುವನ್ನು ಎತ್ತಿಕೊಂಡು ಹೋಗಿ ತನ್ನ ಗುಡಿಸಲಿನಲ್ಲಿ ಶುಶ್ರೂಷೆ ಮಾಡಿ ಸ್ನಾನ ಮಾಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆರಾಧನಾ ಸಮಿತಿ ಅಧ್ಯಕ್ಷ ಸೂರೆಕುಂಟೆ ಸತ್ಯನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನಕ್ಕೆ ತಂದಿದ್ದಾರೆ.