Friday, September 20, 2024
ಸುದ್ದಿ

ಮಿಂಚಿನ ಓಟಗಾರ ರಾಕೆಟ್ ಮೋಡ ಇನ್ನು ನೆನೆಪು ಮಾತ್ರ – ಕಹಳೆ ನ್ಯೂಸ್

ಮಂಗಳೂರು: ಮನೆ ಮಗನನ್ನು ಕಳೆದುಕೊಂಡಂತೆ ದುಖತಪ್ತರಾದ ಯಜಮಾನ, ತನ್ನ ಆಪ್ತ ಗೆಳೆಯನ್ನು ಕಾಣದೆ ಚಡಪಡಿಸುತ್ತಿರುವ ಜೊತೆಗಾರ, ಪ್ರತಿ ನಿತ್ಯ ಬೆಂಗಾವಲಾಗಿ ನಿಂತು ಆರೈಕೆ ಮಾಡಿ, ಇಂದು ಸರ್ವಸ್ವವನ್ನೆ ಕಳೆದುಕೊಂಡಂತೆ ಕಣ್ಣಿರಿಡುತ್ತಿರುವ ಸೇವಕ, ಮಾನವನ ಅಂತ್ಯ ಸಂಸ್ಕಾರದಂತೆ ಸಕಲ ಗೌರವವನ್ನು ಪಡೆದ ಕೋಣ, ಎಲ್ಲರ ಮನ ಕಲಕುವಂತ ಈ ದೃಶ್ಯ ಕಂಡು ಬಂದಿದ್ದು ನಂದಳಿಕೆ ಶ್ರೀಕಾಂತ ಅವರ ಮನೆಯಲ್ಲಿ.

ತುಳುನಾಡಿನ ಹೆಮ್ಮೆಯ ಜನಪದ ಕ್ರೀಡೆ ಕಂಬಳ. ಕಂಬಳ ಕ್ರೀಡೆಯಲ್ಲಿ ಮುಖ್ಯ ಪಾತ್ರ ವಹಿಸೋದು ಅಂದ್ರೆ ಅದು ಕಂಬಳದ ಕೋಣ. ಅಪರಿಮಿತ ಸಾಧನೆಯ ಪಟ್ಟಿಯಲ್ಲಿ ಮೊದಲ ಸ್ಧಾನದಲ್ಲಿ ನಿಲ್ಲೋ ಕೋಣ ಅಂದ್ರೆ ಅದು ರಾಕೆಟ್ ಮೋಡ, ಕಂಬಳದ ಅಖಾಡದಲ್ಲಿ ರಾಕೇಟ್ ಮೋಡ ಬಂದು ನಿಂತ್ರೆ ಸಾಕು ಗೆಲುವಿನ ಪಾತಕೆ ಹಾರಿಸೋದಂತು ಗ್ಯಾರಂಟಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕಂಬಳ ಪ್ರೀಯರ ಬಾಯಲ್ಲಿ ಕಂಬಳ ಅಂದಾಗ ತಟ್ ಅಂತ ಮೊದಲ ಹೆಸರು ಬರೋದೇ ರಾಕೆಟ್ ಮೋಡನದ್ದು, ಕಂಬಳ ಕ್ಷೆತ್ರದಲ್ಲಿ ತನ್ನದೆ ಹವ ಎಬ್ಬಿದೆ ಈ ರಾಕೆಟ್ ಮೋಡ ನಿನ್ನೆ ಕಂಬಳ ಕ್ಷೇತ್ರದಲ್ಲಿ ತನ್ನ ಪಾತ್ರವನ್ನ ಮುಗಿಸಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ.

ಕಂಬಳದ ಓಟದಲ್ಲಿ ಚಾಕ್ಷಣನಂತೆ ಇದ್ದ ಮೋಡ ಇಂದು ಸ್ಧಬ್ದವಾಗಿದೆ, ಇಡಿ ಊರಿಗೆ ಊರೇ ದುಖದ ಮಡುವಿನಲ್ಲಿ ಮುಳುಗಿ ಹೋಗಿದೆ. ಕಂಬಳದ ಕೆರೆಯಲ್ಲಿ ಕೊಂಬು ವಾಲಗದ ಸದ್ದಿಗೆ, ಜನರ ಪ್ರೋತ್ಸಾಹದ ದ್ವನಿಗೆ ವಿಜಯದ ಸಾವರಿ ಮಾಡುತ್ತಿದ್ದ ಮೋಡ ಚಿರನಿದ್ರೆಗೆ ಜಾರಿದೆ.

ಚಿಕ್ಕ ವಯಸ್ಸಿನಲ್ಲಿ ಬ್ರಹ್ಮವರದ ಹಂದಾಡಿ ಶಂಕರ ಪೂಜಾರಿ ಅವರ ಮನೆಯಲ್ಲಿ ಬೆಳೆದ ಮೂಡ, ಜೂನಿಯರ್ ನೇಗಿಲು ವಿಭಾಗದ ಮೂಲಕ ಕಂಬಳ ಕ್ಷೇತಯ್ರಕ್ಕೆ ಪಾದರ್ಪಣೆ ಮಾಡಿತ್ತು.

20 ವರ್ಷಗಳ ಹಿಂದೆ ಇಹಲೋಕದ ಯಾತ್ರೆಯನ್ನ ಮುಗಿಸಿ ಕಂಬಳ ಪ್ರಿಯರ ಹೃದಯವನ್ನ ಭಾರಗೊಳಿಸಿ ಪರಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ.