Recent Posts

Sunday, January 19, 2025
ಸುದ್ದಿ

ಮಾಣಿಯಲ್ಲಿ ಪ್ರಯೋಜನ ಬಾರದ ವಿಜಯಾ ಬ್ಯಾಂಕ್‌ ಎ.ಟಿ.ಎಂ: ಸಾರ್ವಜನಿಕ ಉಪಯೋಗಕ್ಕೆ ಮನವಿ – ಕಹಳೆ ನ್ಯೂಸ್

ಬಂಟ್ವಾಳ: ಮಾಣಿ ಎಂಬ ಪುಟ್ಟ ಊರಿನಲ್ಲಿ ಯಾವುದೇ ಅಗತ್ಯಕ್ಕೆ ಪ್ರಯೋಜನ ಬಾರದ ಸಂಗತಿ ಎಂದರೆ ಮಾಣಿ ವಿಜಯಾ ಬ್ಯಾಂಕ್‌ ಎ.ಟಿ.ಎಂ. ಎ.ಟಿ.ಎಂ.ಇದೆ ಅದರೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ. ಈ ಬಾಗದ ಅಗತ್ಯ ಕ್ಕೆ ಬೇಕಾಗುವ ಸಂದರ್ಭದಲ್ಲಿ ಇದು ಇದ್ದು ಇಲ್ಲದಂತಾಗಿದೆ.

ಇದು ಕಳೆದ ಎರಡು ದಿನಗಳಲ್ಲಿ ಹಾಳಾಗಿದ್ದು ತುರ್ತು ಹಣದ ಅವಶ್ಯಕತೆ ಇರುವ ಮಾಣಿಯ ಸಾರ್ವಜನಿಕರಿಗೆ ತೊಂದರೆ ಆಗಿದೆ. ನಿನ್ನೆ ಮೊನ್ನೆ ಅಂತ ಅಲ್ಲ ಮಾಣಿ ಮತ್ತು ಪರಿಸರದ ಜನತೆಯ ಅಗತ್ಯಕ್ಕೆ ಕೈ ಕೊಡುವ ಮೂಲಕ, ಇದ್ದೂ ಇಲ್ಲದ ಅನುಭವ ಗ್ರಾಹಕರಿಗೆ ನೀಡುವ ಮೂಲಕ ಇದು ವಿಶಿಷ್ಟ ಎ.ಟಿ.ಎಂ. ಡಿಜಿಟಲ್ ಇಂಡಿಯಾಗೆ ದೊಡ್ಡ ಅಪವಾದ ಎಂಬಂತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಸ್ಥಳೀಯ ಸಾರ್ವಜನಿಕರಲ್ಲಿ, ಗ್ರಾಹಕರಲ್ಲಿ ಈ ಬಗ್ಗೆ ಕೇಳಿದರೆ ನಾವು ಹೇಳಿ ಹೇಳಿ ಸಾಕಾಯಿತು. ದೂರು ಕೊಟ್ಟ ಬಳಿಕ ಸರಿಮಾಡುತ್ತಾರೆ.ಪುನಃ – ಪುನಃ ಹಾಳಾಗುತ್ತದೆ ಎಂದು ವಿವರಿಸುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಬಂಧ ಪಟ್ಟವರು ಈ ತುರ್ತಾಗಿ ಕಾರ್ಯಪ್ರವೃತ್ತರಾಗಿ ಪುನರಾವರ್ತನೆಗೊಳ್ಳುವ ಅವ್ಯವಸ್ತೆಯನ್ನು ಹೋಗಲಾಡಿಸಿ ಸಾರ್ವಜನಿಕರಿಗೆ ಉಪಯೋಗ ಅಗುವಂತೆ ಮಾಡಬೇಕಾಗಿ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.