Thursday, April 10, 2025
ಸುದ್ದಿ

 ಪಿ.ಎಫ್.ಐ. ದೇಶದ್ರೋಹಿ ಸಂಘಟನೆ ; ನಿಷೇಧಿಸಿ | ವಿಕಾಸ್ ಪುತ್ತೂರು ಆಗ್ರಹ

ಬೆಂಗಳೂರು : ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿನ ದೇಶ ವಿರೋಧಿ ಮತ್ತು ಸ್ವಾತಂತ್ರ್ಯ ಹೋರಾಟಗಾರನ್ನು ಪ್ರಶ್ನಿಸುವ ಹೇಳಿಕೆಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿ.ಜೆ.ಪಿ. ವಕ್ತಾರ ವಿಕಾಸ್ ಪುತ್ತೂರು ಪ್ರಕರಣವನ್ನು ಖಂಡಿಸಿದ್ದಾರೆ. ರಾಜ್ಯದಲ್ಲಿ ನಡೆದ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಗಳಲ್ಲಿ ಪಿ.ಎಫ್.ಐ. ಪಾತ್ರ ಇರುವುದು ಸಾಭಿತಾಗಿದೆ. ಇಂದು ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಮತ್ತೆ ಪಿ.ಎಫ್.ಐ. ಬಣ್ಣ ಬಯಲಾಗಿದೆ. ಗಾಂಧೀಜಿಯವರ ಬಗ್ಗೆ ಟೀಕಿಸಿ ಸ್ವತಃ ತಾವೇ ತಮ್ಮ ಮುಖಕ್ಕೆ ಮಸಿ ಬಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇಂತಾಹ ದೇಶದ್ರೋಹಿ ಸಂಘಟನೆಯನ್ನು ರಾಜ್ಯ ಸರಕಾರ ತಕ್ಷಣ ನಿಷೇಧಿಸಬೇಕೆಂದು ಬಿ.ಜೆ.ಪಿ. ವಕ್ತಾರ ವಿಕಾಸ್ ಪುತ್ತೂರು ಆಗ್ರಹಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ