Recent Posts

Sunday, January 19, 2025
ಸುದ್ದಿ

ಸಾಮಾಜಿಕ ತಾಣದ ದೈತ್ಯ ಎನಿಸಿಕೊಂಡಿರುವ ಫೇಸ್​ಬುಕ್​ನಲ್ಲಿ ಸಮಸ್ಯೆ: ಸೇವೆ ಸ್ಥಗಿತ – ಕಹಳೆ ನ್ಯೂಸ್

ಸಾಮಾಜಿಕ ತಾಣದ ದೈತ್ಯ ಎನಿಸಿಕೊಂಡಿರುವ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ತಾಣದ ಸೇವೆಯಲ್ಲಿ ಅಡಚಣೆ ಉಂಟಾಗಿದೆ. ಫೇಸ್​ಬುಕ್​ನ ಹೋಮ್​​ ಪೇಜ್​ ಸರ್ವೀಸ್ ಅನ್​ಅವೇಲೆಬಲ್​ ಎಂಬ ಸಂದೇಶ ಕಾಣಿಸಿಕೊಂಡಿಲ್ಲದೆ, ಕೆಲವೊತ್ತು ಸ್ಥಗಿತಗೊಂಡಿದೆ. ಇದರಿಂದ ಲಕ್ಷಾಂತರ ಬಳಕೆದಾರರು ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ ವಿರುದ್ಧ #FacebookDown ಮತ್ತು #InstagramDown ಎಂಬ ಹ್ಯಾಶ್​ ಟ್ಯಾಗ್ ನೀಡಿ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಈ ತಿಂಗಳಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಫೇಸ್​ಬುಕ್​ನಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಮುಂಚಿತವಾಗಿ ಯುರೋಪ್, ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಮೆಸೆಂಜರ್ ಆ್ಯಪ್ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಮೊದಲಿಗೆ ಇದು ಇಂಟರ್​ನೆಟ್ ಸಮಸ್ಯೆ ಎಂದು ಭಾವಿಸಲಾಗಿತ್ತಾದರೂ, ಆಮೇಲೆ ಫೇಸ್​ಬುಕ್​ನಲ್ಲಿ ಉಂಟಾಗಿರುವ ಎರರ್ ಎಂಬುದು ಗೊತ್ತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಡವುನ್​ಡಿಟೆಕ್ಟರ್. ಕಾಮ್ ವರದಿ ಪ್ರಕಾರ ಸಾವಿರಾರು ಮೆಸೆಂಜರ್ ಯೂಸರ್ಸ್​ ಲಾಗಿನ್ ಸರ್ವರ್​ಗೆ ಕನೆಕ್ಟ್ ಆಗಲು ಮತ್ತು ಸಂದೇಶಗಳನ್ನು ಸ್ವೀಕರಿಸಲು ತೊಂದರೆ ಎದುರಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಕೆಲವು ಗಂಟೆಗಳ ಬಳಿಕ ಮೆಸೆಂಜರ್​ನ್ನು ರಿಸ್ಟೋರ್ ಮಾಡಿಕೊಳ್ಳುವ ಮೂಲಕ ಸೇವೆಯನ್ನು ಪುನರಾರಂಭಿಸಲಾಯಿತು.

ಒಂದು ಮೂಲದ ಪ್ರಕಾರ ಮೆಸೆಂಜರ್​ನಲ್ಲಿ ಕಾಣಿಸಿಕೊಂಡ ಈ ಸಮಸ್ಯೆಗೆ ಫೇಸ್​ಬುಕ್​ನ ಹೊಸ Delete thread ಆಯ್ಕೆಯಾಗಿದೆ. ಈ ಅಪ್ಲಿಕೇಶನ್​ನಲ್ಲಿ ನೀಡಲಾಗಿರುವ ಹೊಸ ಆಯ್ಕೆಯು ಕ್ರ್ಯಾಶ್ ಆಗಿರುವ ಕಾರಣದಿಂದ ಮೆಸೆಂಜರ್​ ಸ್ಥಗಿತವಾಗಿದೆ ಎನ್ನಲಾಗಿದೆ. ಈ ಹೊಸ ಫೀಚರ್​ ಮೂಲಕ ಫೇಸ್​ಬುಕ್​ ತನ್ನ ಬಳಕೆದಾರರಿಗೆ ಕಳುಹಿಸಲ್ಪಟ್ಟ ಮೆಸೇಜ್​ನ್ನು ಡಿಲೀಟ್ ಮಾಡಿಕೊಳ್ಳುವ ಆಯ್ಕೆಯನ್ನು ಒದಗಿಸಿದೆ.

ಫೇಸ್​ಬುಕ್​ ಪೇಜ್​ಗಳು ತುಂಬ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಸಂದೇಶ​ ಕಳಿಸಲು ಸಾಧ್ಯವಾಗುತ್ತಿಲ್ಲ. ಇನ್​ಸ್ಟಾಗ್ರಾಂನಲ್ಲೂ ಇದೇ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಅನೇಕ ಬಳಕೆದಾರರು ದೂರು ಸಲ್ಲಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಫೇಸ್​ಬುಕ್ ಹ್ಯಾಕಿಂಗ್ ಸುದ್ದಿಗಳು ಕೇಳಿ ಬರುತ್ತಿದ್ದರಿಂದ ಹೆಚ್ಚಿನ ಬಳಕೆದಾರರು ಹ್ಯಾಕ್​ ಆಗಿದೆ ಎಂದು ಭಾವಿಸಿದ್ದಾರೆ. ಆದರೆ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಡೌನ್ ಆಗಿದ್ದಕ್ಕೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಈ ಕುರಿತು ಫೇಸ್​ಬುಕ್ ಕಂಪನಿ ಯಾವುದೇ ಅಧಿಕೃತ ಹೇಳಿಕೆ ನೀಡದೆ ಅಚ್ಚರಿ ಮೂಡಿಸಿದೆ.