ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ರಾಜಕೀಯವಾಗಿ ಗೊಂದಲದ ತಾಣವಾಗಿದೆ. ಜನನಾಯಕರುಗಳು ಅಭಿವೃದ್ಧಿಯ ಬಗ್ಗೆ ಯೋಚಿಸಬೇಕು ಆದ್ರೆ ಪಾಲಿಕೆಯ ಮೇಯರ್ ಮತ್ತು ಅಧಿಕಾರಿಗಳು ಮಲತಾಯಿ ಧೋರಣೆ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಮಂಗಳೂರು ಮನಪಾದ ಮೇಯರ್ ಮತ್ತು ಅಧಿಕಾರಿಗಳು ಮಂಗಳೂರು ಬಿಜೆಪಿ ಶಾಸಕರನ್ನು ಗಣನೆಗೆ, ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಂಗಳೂರು ಅಭಿವೃದ್ಧಿಯ ಸಭೆಯಲ್ಲಿ ತಮ್ಮನ್ನು ಕಡೆಗಣಿಸುತ್ತಿದ್ದಾರೆ.
ಸಭೆಗೆ ನಮಗೆ ಆಹ್ವಾನ ನೀಡುತ್ತಿಲ, ಕಾಂಗ್ರೆಸ್ ಮಾಜಿ ಶಾಸಕರಾದ ಮೊಯ್ದಿನ್ ಬಾವ ಮತ್ತು ಜೆ.ರ್ ಲೋಬೊ ಶಾಸಕರಾಗಿದ್ದ ಸಂದರ್ಭದಲ್ಲಿ ಅವರು ಬಾರದೆ ಸಭೆ ನಡೆಯುತ್ತಿರಲಿಲ್ಲ.
ಇದೀಗ ಸಭೆಗೆ ನನ್ನನ್ನು ಮತ್ತು ಶಾಸಕ ಭರತ್ ಶೆಟ್ಟಿ ಅವರನ್ನು ಸಭೆಗೆ ಕರೆಯದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಬೇಸರ ವ್ಯಕ್ತಪಡಿಸಿದ್ದಾರೆ.