ಮಂಗಳೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ವಿಚಾರದಲ್ಲಿ ದೇಶವಿಡೀ ಗಲಭೆ ಎದ್ದಿದೆ. ಈಗಿರುವಾಗ ಶಬರಿಮಲೆ ಕುರಿತಂತೆ ಕೇರಳ ಸರ್ಕಾರ ತೆಗೆದುಕೊಂಡ ಕ್ರಮ ಖಂಡನೀಯವಾಗಿದ್ದು ಇದನ್ನು ರಾಜಕೀಯ ನಾಯಕರುಗಳು ವಿರೋಧಿಸುತ್ತಿದ್ದು, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕೇರಳವು ಇನ್ನೊಂದು ಜಲಿಯನ್ ವಾಲಾಬಾಗ್ ತರಹ ಆಗಿದೆ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ನಮ್ಮ ಅಧ್ಯಯನ ತಂಡ ಹೋಗಿ ಅಧ್ಯಯನ ನಡೆಸಿದೆ. ಈ ವೇಳೆ ಅಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿರುವುದು ಬಯಲಾಗಿದೆ.
ಕೇರಳವನ್ನ ಅಯೋಧ್ಯೆ ಮಾಡಲು ಬಿಡಲ್ಲ ಅಂತಾ ಕೇರಳ ಸಿಎಂ ಪಿಣರಾಯ್ ವಿಜಯನ್ ಹೇಳಿದ್ದರು. ಆದರೆ ಇದೀಗ ಅವರೇ ಶಬರಿಮಲೆ ಸುತ್ತ ತುರ್ತು ಪರಿಸ್ಥಿತಿ ಹೇರಿ ಕೇರಳವನ್ನ ಇನ್ನೊಂದು ಜಲಿಯನ್ ವಾಲಾಬಾಗ್ ತರಹ ಮಾಡಿದ್ದಾರೆ.
ಸಂಶೋಧನಾ ವರದಿಯನ್ನು ಲೋಕಸಭಾ ಅಧಿವೇಶನದಲ್ಲಿ ಮಂಡಿಸುವ ಮೂಲಕ ಚರ್ಚೆ ಮಾಡಲಿದ್ದೇವೆ ಎಂದರು.