Saturday, November 23, 2024
ಸುದ್ದಿ

2019ರ ಮಾರ್ಚ್ ಹೊತ್ತಿಗೆ, ಶೇ 50 ರಷ್ಟು ಎಟಿಎಂಗಳು ಬಂದ್ – ಕಹಳೆ ನ್ಯೂಸ್

ದೆಹಲಿ: ಬ್ಯಾಂಕ್ ಗ್ರಾಹಕರಿಗೆ ಶಾಕ್ ಅಗೋವಂತ ಸುದ್ದಿಯೊಂದನ್ನು ಎಟಿಎಂ ಉದ್ಯಮದ ಒಕ್ಕೂಟ ಬಹಿರಂಗಪಡಿಸಿದೆ. ಮುಂದಿನ ಮಾರ್ಚ್ ವೇಳೆಗೆ ದೇಶದ 1.13 ಲಕ್ಷ ಎಟಿಎಂಗಳು ತಮ್ಮ ಕಾರ್ಯ ಸ್ಥಗಿತಗೊಳಿಸಲಿವೆ ಎಂದು ತಿಳಿಸಿದೆ.

ಎಟಿಎಂ ಅಂದ್ರೆ ಎನಿ ಟೈಮ್ ಮನಿ ಬರ‍್ಲೇ ಬೇಕು, ಆದ್ರೆ ಇತ್ತೀಚಿನ ದಿನಗಳಲ್ಲಿ ಹಣವಿಲ್ಲದೆ ಪಾಲು ಬಿದ್ದ ಅದೇಷ್ಟೋ ಎಟಿಎಮ್‌ಗಳು ನಮ್ಮ ಮುಂದಿದೆ, ಆದ್ರೆ ಇದಕ್ಕಿಂತ ದೊಡ್ಡ ವಿಚಾರ ಅಂದ್ರೆ ಪ್ರಸ್ತುತ ಭಾರತದಲ್ಲಿ 2.38 ಲಕ್ಷ ಎಟಿಎಂಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರ ಅರ್ಧದಷ್ಟು ಎಟಿಎಂಗಳು 2019 ರ ಮಾರ್ಚ್ನಲ್ಲಿ ಸ್ಥಗಿತಗೊಳ್ಳಳಿವೆ ಎಂದು ಎಟಿಎಂ ಉದ್ದಿಮೆಯ ಮಹಾಒಕ್ಕೂಟ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಟಿಎಂಗಳ ಸಾಫ್ಟೆ್ವೇರ್ ಹಾಗೂ ಹಾರ್ಡ್ವೇರ್ ಅಪ್ಗ್ರೇಡ್ ಜೊತೆಗೆ ಸರ್ಕಾರ ಎಟಿಎಂ ನಿರ್ವಹಣೆ ಕುರಿತು ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿರುವುದರಿಂದ ಇದು ಬ್ಯಾಂಕ್‌ಗಳಿಗೆ ಭಾರಿ ಹೊರೆಯಾಗಿದ್ದು, ಈ ಹಿನ್ನೆಲೆಯಲ್ಲಿ ಎಟಿಎಂಗಳನ್ನು ಬಂದ್ ಮಾಡುವ ನಿರ್ದಾರವನ್ನ ಕೈಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿನ ದಿನಗಳಲ್ಲಿ ಎಲ್ಲರು ಎಟಿಎಂ ಕಾರ್ಡ್ನ್ನು ಅವಲಂಬಿಸಿದ್ದು, ಎಟಿಎಂಗಳನ್ನು ಬಂದ್ ಮಾಡೋದರಿಂದ ಅನೇಕ ಸಮಸ್ಯೆಗಳು ಎದುರಾಗಳಿವೆ, ನಗರ ಹಾಗೂ ಗ್ರಾಮೀಣ ಪ್ರದೇಶದ ಜನತೆಗೆ ಭಾರೀ ತೊಂದರೆ ಆಗಲಿದೆ. ಜೊತೆಗೆ ಭಾರತದ ಮೊಟ್ಟ ಮೊದಲ ಬಿಟ್ ಕಾಯಿನ್ ಎಟಿಎಂ ಬಂದ್ ಆಗೋದರಿಂದಾಗಿ ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಲಕ್ಷಾಂತರ ಫಲಾನುಭವಿಗಳ ಮೇಲೆ ಗಂಭೀರ ಪರಿಣಾಮ ಬೀರುಲಿದೆ.

ಅಲ್ಲದೆ ಸಬ್ಸಿಡಿ ಹಣವನ್ನು ಎಟಿಎಂಗಳಿಂದ ವಿಥ್ ಡ್ರಾ ಮಾಡುವುದು ಕಷ್ಟವಾಗುತ್ತದೆ. ಇನ್ನು ನಗರ ಪ್ರದೇಶಗಳಲ್ಲಿ ಅಪನಗದೀಕರಣದ ವೇಳೆ ಕಂಡುಬಂದ ಸನ್ನಿವೇಶ ಪುನರಾವರ್ತನೆ ಆಗಿ, ಎಟಿಎಂಗಳ ಮುಂದೆ ಉದ್ದುದ್ದ ಸಾಲುಗಳು ಕಂಡಬರಬಹುದು. ಸಹಸ್ರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯು ಇದೆ.