Saturday, November 23, 2024
ಸುದ್ದಿ

ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಅಗತ್ಯವಿದೆ: ಜನರಲ್ ಬಿಪಿನ್ ರಾವತ್ – ಕಹಳೆ ನ್ಯೂಸ್

ಹೊಸದಿಲ್ಲಿ: “ಎನ್‌ಆರ್‌ಸಿಗೆ ನನ್ನ ಬೆಂಬಲವಿದೆ. ಇದನ್ನು ವಿರೋಧಿಸುವ ಪಕ್ಷಗಳು ದೇಶದ ಭದ್ರತೆಯನ್ನು ಕಡೆಗಣಿಸುತ್ತಿವೆ” ಅಸ್ಸಾಂನಲ್ಲಿ ವಿವಾದಿತ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಹೆಸರು ನೊಂದಾವಣೆಗೆ ಕ್ಲೇಮ್ ಸಲ್ಲಿಸಲು ಕೇವಲ ಮೂರು ವಾರಗಳು ಬಾಕಿ ಇರುವ ನಡುವೆಯೇ, ಎಲ್ಲ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಅಗತ್ಯವಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ವಿರೋಧಿಸುವ ಪಕ್ಷಗಳು ಮಾಡುತ್ತಿರುವ ನಕಲಿ ಎನ್‌ಕೌಂಟರ್ ಮತ್ತು ಮಾನವ ಹಕ್ಕು ಉಲ್ಲಂಘನೆ ಆರೋಪಗಳು ಕೂಡಾ ಸುಳ್ಳು ಎಂದು ಪ್ರತಿಪಾದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ದೇಶವನ್ನು ಅಕ್ರಮವಾಗಿ ಪ್ರವೇಶಿಸಿದವರನ್ನು ಗಡೀಪಾರು ಮಾಡುವುದಕ್ಕೆ ನನ್ನ ಬೆಂಬಲವಿದೆ. ಅವರು ಅಕ್ರಮ ವಲಸಿಗರಾಗಿದ್ದರೆ ಅವರನ್ನು ಗಡೀಪಾರು ಮಾಡಬೇಕು. ಅವರು ಕಾನೂನು ಬದ್ಧ ನಾಗರಿಕರಾಗಿದ್ದರೆ ಅವರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಯೊಬ್ಬರಿಗೂ ಪ್ರಯೋಜನವಾಗುವ ರೀತಿಯಲ್ಲಿ ಈ ಪಟ್ಟಿಯನ್ನು ಪರಿಷ್ಕರಿಸಬೇಕು. ಅದು ರಾಜಕೀಯ ವಿಷಯವಾಗಬಾರದು” ಎಂದು ಅಭಿಪ್ರಾಯಪಟ್ಟರು. ಅಕ್ರಮ ವಲಸಿಗರು ಮುಂದುವರಿಯಲು ರಾಜಕೀಯ ಪಕ್ಷಗಳು ನೆರವು ನೀಡುತ್ತಿವೆ ಎಂಬ ಗಂಭೀರ ಆರೋಪ ಮಾಡಿದರು.