Friday, November 15, 2024
ಸುದ್ದಿ

ಎರಡು ಸಾವಿರ ಸಂತರು, ಲಕ್ಷ ಜನ | ರಾಮಮಂದಿರ ನಿರ್ಮಾಣ, ಗೋಸಂರಕ್ಷಣೆ ಕುರಿತು ಚರ್ಚೆ ನಡೆಯಲಿದೆ – ಗೋಪಾಲ್ ಜೀ.

ಉಡುಪಿ : ನ.24,25,26ರಂದು ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸದ್ ಅಧಿವೇಶನದಲ್ಲಿ ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್, ಯೋಗಿ ಆದಿತ್ಯನಾಥ್, ರಾಘವೇಶ್ವರ ಶ್ರೀ ಸೇರಿ ದೇಶದ 2 ಸಾವಿರಕ್ಕೂ ಹೆಚ್ಚು ಸಾಧು ಸಂತರು ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಅಧಿವೇಶನದಲ್ಲಿ ಮುಖ್ಯ ವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣದ ಚರ್ಚೆಯಾಗಲಿದೆ. ಅಸ್ಪೃಶ್ಯತೆ, ಗೋರಕ್ಷಣೆ, ಮತಾಂತರ ವಿಚಾರಗಳ ಬಗ್ಗೆ ವಿಚಾರ ಮಂಡನೆಯಾಗಲಿದೆ. ಧರ್ಮ ಸಂಸದ್​ನಲ್ಲಿ ಸಂತರೇ ಹಲವು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಜಾತಿಗಳ ನಡುವೆ ಕಂದಕ ಸೃಷ್ಟಿಸಿ, ಧರ್ಮವನ್ನು ಒಡೆದು ಆಳುವವರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಧರ್ಮ ಜಾಗೃತಿಗಾಗಿ ನ.26ರಂದು ರಾಜ್ಯದ ಎಲ್ಲ ಜಾತಿ, ವರ್ಗದವರ ಮುಖಂಡರ ಸಭೆ ನಡೆಯಲಿದೆ. 3 ಸಾವಿರಕ್ಕೂ ಅಧಿಕ ಜಾತಿ ಪ್ರಮುಖರು ಭಾಗವಹಿಸಲಿದ್ದಾರೆ. ಅದೇ ದಿನ ಮಧ್ಯಾಹ್ನ ಎಂಜಿಎಂ ಮೈದಾನದಲ್ಲಿ ಬೃಹತ್ ಹಿಂದು ಸಮಾಜೋತ್ಸವ ನಡೆಯಲಿದ್ದು, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು. 1.50 ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ ಎಂದರು. ಸಮಾವೇಶಕ್ಕೂ ಮುನ್ನ ನಗರಾದ್ಯಂತ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಯಲ್ ಗಾರ್ಡನ್​ನಲ್ಲಿ ಧರ್ಮ ಸಂಸದ್

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವ ಹಿಂದು ಪರಿಷತ್ ಉಡುಪಿ- ಧರ್ಮಸಂಸದ್ ಅಭೂತಪೂರ್ವ ಯಶಸ್ವಿಯಾಗಿಸಲು, ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ. ಜಿಲ್ಲೆಯ ಪ್ರತೀ ಬೂತ್ ಬಟ್ಟದಲ್ಲಿ ಕಾರ್ಯಕರ್ತರ ಪಡೆ ಸಿದ್ಧ್ದಾಗಿದ್ದು, ಪ್ರಚಾರ ಕಾರ್ಯ ನಡೆಸುತ್ತಿದೆ. ಸಾಧು ಸಂತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಎಲ್ಲ ಸಹಕಾರ ಸಿಗುತ್ತಿದೆ. ಕಾರ್ಯಕ್ರಮ ರೂಪರೇಷೆ, ಯೋಜನೆಗಳ ಬಗ್ಗೆ ಬೈಠಕ್​ಗಳು, ವಲಯ ಸಮಾವೇಶ ನಡೆಸಲಾಗುತ್ತಿದೆ ಎಂದರು. ಸಾವಿರ ಪ್ರಬಂಧಕರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ ಗೋಪಾಲ್, ಧರ್ಮಸಂಸದ್​ನ ಮಹತ್ವದ ಸಭಾ ಕಾರ್ಯಕ್ರಮಗಳು ಕಲ್ಸಂಕ ರಾಯಲ್ ಗಾರ್ಡನ್​ನಲ್ಲಿ ನಡೆಯಲಿದೆ ಎಂದರು.

Leave a Response