ಬಂಟ್ವಾಳ: ಸಾಲು ಸಾಲು ಜಿರಲೆಯ ಮ್ಯೂಸಿಕ್ ಡ್ಯಾನ್ಸ್ ಗಳು, ಮೂಗು ಬಿಟ್ಟರೆ ಗಬ್ಬು ವಾಸನೆ, ಕೊಳೆತ ಸ್ಥಿತಿ ಯಲ್ಲಿರುವ ತ್ಯಾಜ್ಯ ವಸ್ತುಗಳ ರಾಶಿ , ಪ್ಲಾಸ್ಟಿಕ್ ನೀರಿನ ಬಾಟಲ್ ಗಳ ಸಂಗ್ರಹ ಕೊಠಡಿಯ ತರಹ ಕಾಣುವ ಕಸದ ಕೊಂಪೆಯ ದ್ರಶ್ಯ! ಇದು ಎಲ್ಲಿಯದು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾದೀತು.
ಬಂಟ್ವಾಳ ತಾಲೂಕಿನ ಇಲಾಖೆಗಳ ಹೆಡ್ ಅಗಿರುವ ಕೋಟ್ಯಾಂತರ ರೂ ಖರ್ಚು ವೆಚ್ಚದಲ್ಲಿ ನಿರ್ಮಾಣವಾದ ಮಿನಿವಿಧಾನ ಸೌಧದ ಕಚೇರಿಯಲ್ಲಿ ತಹಶೀಲ್ದಾರರು ಕೆಲಸ ಮಾಡುವ ಪಕ್ಕದಲ್ಲಿರುವ ಗಂಡಸರ ಶೌಚಾಲಯದಲ್ಲಿ ಭದ್ರವಾಗಿರುವ ಕೊಠಡಿಯಲ್ಲಿರುವ ದ್ರಶ್ಯ
ಶೌಚಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷೆ ಯವರು ಇದೇ ಶೌಚಾಲಯ ದ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದಲ್ಲದೆ , ಶುಚಿತ್ವಕ್ಕೆ ಮಹತ್ವ ನೀಡಿ ಎಂದು ತಿಳಿಸಿದ್ದರು.
ಆದರೆ ಶೌಚಾಲಯವೇನೋ ಕ್ಲೀನ್ ಆಗಿದೆ ಆದರೆ ಇದರ ಸಮೀಪವೇ ಕಸದ ಕೊಂಪೆಯಾದ ಬಗ್ಗೆ ಮಾತ್ರ ಒಳಗೆ ಹೋದವರು ಬದುಕಿದೆಯಾ ಬಡ ಜೀವ ಎಂದು ಓಡಿ ಬರುವ ಸ್ಥಿತಿ!
ಊರಿಗೆ ಬುದ್ದಿ ಹೇಳಬೇಕಾದ ಇಲಾಖೆಯ ಸ್ಥಿತಿ ಈ ರೀತಿಯಾದರೆ ಇನ್ನುಳಿದ ಇಲಾಖೆಯ ಪರಿಸ್ಥಿತಿ ದೇವರೆ ಬಲ್ಲ..