Recent Posts

Monday, January 20, 2025
ಸುದ್ದಿ

ಹೈಸ್ಪೀಡ್ ಬೈಕ್ ರೈಡ್: ನದಿಗೆ ಬಿದ್ದು ಇಬ್ಬರು ಯುವಕರ ದುರ್ಮರಣ – ಕಹಳೆ ನ್ಯೂಸ್

ಮಂಗಳೂರು: ಓವರ್ ಟೇಕ್ ವೇಳೆ ನಿಯಂತ್ರಣ ತಪ್ಪಿದ ಬೈಕ್ ಸವಾರರಿಬ್ಬರು ನದಿಗೆ ಬಿದ್ದು ಮುಳುಗಿ ಮೃತಪಟ್ಟ ಘಟನೆ ಮಂಗಳೂರಿನ ಕೂಳೂರು ಸೇತುವೆ ಬಳಿ ನಡೆದಿದೆ. ಮೃತರನ್ನ ನಿತಿನ್, ವಿಜೇಷ್ ಎಂದು ಗುರುತಿಸಲಾಗಿದೆ.

ಇವರಿಬ್ಬರು ಬಂಗ್ರಕೂಳೂರಿನಿಂದ ಕೂಳೂರಿನ ಕಡೆಗೆ ತಮ್ಮ ಬಜಾಜ್ ಅವೆಂಜರ್ ಬೈಕಲ್ಲಿ ನಿಕೋಲ್ಹೋಸ್ ಹೌಸ್ ಬಳಿ ಹೋಗುತ್ತಿದ್ರು. ಅದೇ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಇನ್ನೊಂದು ಬೈಕ್ ಅಪಾಚಿಯನ್ನ ಓವರ್ ಟೇಕ್ ಮಾಡೋಕೇ ಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಕೂಳೂರು ಸೇತುವೆ ರಸ್ತೆಯಲ್ಲಿ ವೇಗವಾಗಿ ಬೈಕ್ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್ ಸಮೇತ ಇವರಿಬ್ರು ನದಿಗೆ ಬಿದ್ದು ನೀರಿನಲ್ಲಿ ‌ಮುಳುಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.