Friday, September 20, 2024
ಸುದ್ದಿ

ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ – ಕಹಳೆ ನ್ಯೂಸ್

ದೆಹಲಿ: ನವೆಂಬರ್ ತಿಂಗಳಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಒಟ್ಟು 4 ರೂಪಾಯಿ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲಿ 3.10 ರೂಪಾಯಿ ಇಳಿಕೆಯಾದಂತಾಗಿದೆ.  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಇಳಿಕೆ ಕಾಣುತ್ತಿರುವ ಪರಿಣಾಮ ಅದಕ್ಕನುಗುಣವಾಗಿ ಭಾರತೀಯ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿಗದಿಪಡಿಸುತ್ತಿದೆ.

ಇಂದೂ ಕೂಡಾ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗಿದ್ದು, ಇಂದಿನ ಮಹಾನಗರಗಳಲ್ಲಿನ ದರ ಇಂತಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ 75.57 ರೂಪಾಯಿಯಾಗಿದ್ದರೆ, ಡೀಸೆಲ್ ದರ 70.56 ರೂಪಾಯಿಗಳಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಣಿಜ್ಯ ನಗರಿ ಮುಂಬೈನಲ್ಲಿ ಇಂದಿನ ಪೆಟ್ರೋಲ್ ದರ 81.10 ರೂಪಾಯಿಯಾಗಿದ್ದರೆ, ಡೀಸೆಲ್ ದರ 73.93 ರೂಪಾಯಿಗಳಾಗಿದೆ. ಚೆನ್ನೈ ಮಹಾನಗರದಲ್ಲಿ ಇಂದಿನ ಪೆಟ್ರೋಲ್ ದರ 78.46 ರೂಪಾಯಿಯಾಗಿದ್ದರೆ, ಡೀಸೆಲ್ ದರ 74.99 ರೂಪಾಯಿಗಳಾಗಿದೆ. ಹಾಗೂ ಕೋಲ್ಕತ್ತಾ ಮಹಾನಗರದಲ್ಲಿ ಇಂದಿನ ಪೆಟ್ರೋಲ್ ದರ 77.53 ರೂಪಾಯಿಯಾಗಿದ್ದರೆ, ಡೀಸೆಲ್ ದರ 72.83 ರೂಪಾಯಿಗಳಾಗಿದೆ.

ಜಾಹೀರಾತು