Recent Posts

Monday, January 20, 2025
ಸುದ್ದಿ

ನ.24 ರಂದು ಕುಡಿಪ್ಪಾಡಿಯಲ್ಲಿ ಭತ್ತದ ಸುಗ್ಗಿ ಹಬ್ಬ, ಜಲ ಕೊಯ್ಲು – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ವಿವೇಕಾನಂದ ಕಾಲೇಜು ದತ್ತು ಸ್ವೀಕರಿಸಿರುವ ಕುಡಿಪ್ಪಾಡಿ ಗ್ರಾಮದಲ್ಲಿ ಭತ್ತದ ಸುಗ್ಗಿ ಹಬ್ಬ ಮತ್ತು ಜಲಕೊಯ್ಲು ಉದ್ಘಾಟನಾ ಸಮಾರಂಭ ನ.24 ರಂದು ಕುಡಿಪಾಡಿ ಶ್ರೀ ಲಕ್ಷಿ್ಮೀಜನಾರ್ಧನ ಸ್ವಾಮಿ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಸುಕುಮಾರ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಶ್ರೀನಿವಾಸ ಪೈ ನೆರವೇರಿಸುವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೃಷಿಕ ನಾರಾಯಣ ಮಯ್ಯ, ಪುತ್ತೂರಿನ ರೋಟರಿ ಕ್ಲಬ್ ಅಧ್ಯಕ್ಷ ರೊ.ಮನೋಹರ ಕೊಳಕಿಮಾರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ಧನ ಎರ್ಕಾಡಿತ್ತಾಯ, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್, ಗ್ರಾಮ ವಿಕಾಸ ಸಮಿತಿಯ ಸದಸ್ಯ ಅನಂತಕೃಷ್ಣ ನಾಯಕ್, ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಖಾರಿ ವೆಂಕಟೇಶ ಕೆ ಮುದೂರ್ ಅಭ್ಯಾಗತರಾಗಿ ಆಗಮಿಸುವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭಾ ಕಾರ್ಯಕ್ರಮದ ತರುವಾಯ ವಿವೇಕಾನಂದ ಕಾಲೇಜು ಹಾಗೂ ಗ್ರಾಮ ವಿಕಾಸ ಸಮಿತಿಯ ವತಿಯಿಂದ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಬೆಳೆಯಲಾಗಿರುವ ಭತ್ತವನ್ನು ಕೊಯ್ಲು ಮಾಡಲಾಗುವುದು.