Recent Posts

Monday, April 14, 2025
ಸುದ್ದಿ

ಸಾಲಭಾದೆಯಿಂದ ರೈತ ಆತ್ಮಹತ್ಯೆ: ಮುಖ್ಯಮಂತ್ರಿಗಳ ಹೆಸರಿಗೆ ಡೆತ್ ನೋಟ್ – ಕಹಳೆ ನ್ಯೂಸ್

ಮಂಡ್ಯ : ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಕನ್ನಹಟ್ಟಿ ಗ್ರಾಮದ ರೈತನೊಬ್ಬ ಸಾಲಭಾದೆಯಿಂದ ಮನನೊಂದು ಮುಖ್ಯಮಂತ್ರಿಗಳ ಹೆಸರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಜೈಕುಮಾರ್ (43) ಮೃತ ರೈತ. ಮದುವೆಯಾಗಿ 15 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. 35 ಗುಂಟೆ ಜಮೀನು ಹೊಂದಿದ್ದು, ಕಬ್ಬು, ತರಕಾರಿ ಬೆಳೆಯುತ್ತಿದ್ದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ಲಕ್ಷ ಸಾಲ ಮಾಡಿದ್ದೇನೆ, 80 ಸಾವಿರ ಸಾಲ ಮಾಡಿ ವ್ಯವಸಾಯಕ್ಕೆ ಹಾಕಿದ್ದೆ, ಅದೂ ಕೂಡ ಕೈ ಹಿಡಿಯಲಿಲ್ಲ. ಗಂಟಲು ಕ್ಯಾನ್ಸರ್ ಇದ್ದು, ವೈದ್ಯರು 3 ಲಕ್ಷ ರೂ. ಹಣಬೇಕು ಎಂದಿದ್ದರು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯಮಂತ್ರಿಗಳು ಇಂದು ಮಂಡ್ಯಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಸಾಲಬಾಧೆ ಮತ್ತು ಅನಾರೋಗ್ಯದಿಂದ ಜಮೀನಿನ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ