ಇಸ್ಲಾಮಾಬಾದ್: ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲಿರುವ, ನಾಲ್ವರು ಗನ್ಮ್ಯಾನ್ಗಳು ಮಿತ್ರ ದೇಶ ಚೀನಾದ ರಾಯಭಾರಿ ಕಚೇರಿಗೆ ಪ್ರವೇಶಿಸಿ, ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ, ಅವರನ್ನು ಚೆಕ್ ಪಾಯಿಂಟ್ ಬಳಿ ತಡೆ ಹಿಡಿದಿದ್ದಾರೆ. ಅಪರಿಚಿತ ಶಸ್ತ್ರಧಾರಿ ವ್ಯಕ್ತಿ ಗುಂಡಿನ ದಾಳಿ ಆರಂಭಿಸಿದ ಕೂಡಲೇ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ.
ಅಪರಿಚಿತ ವ್ಯಕ್ತಿ ಏಕಾಏಕಿ ನಡೆಸಿದ ಗುಂಡಿನ ದಾಳಿಗೆ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ. ಮತ್ತೊಬ್ಬ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಾವೇದ್ ಅಲಂ ಒಧೊ ತಿಳಿಸಿದ್ದಾರೆ.
ದಾಳಿ ನಂತರ ದಾಳಿಕೋರರು ಸ್ಥಳದಿಂದ ಕಾಲ್ಕಿತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಭದ್ರತಾ ಪಡೆ ಬಂದು ತೆರವು ಕರ‍್ಯಾಚರಣೆ ನಡೆಸಿದ್ದಾರೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿಯೂ ಈ ದಾಳಿಯ ಚಿತ್ರಗಳು ಹರಿದಾಡುತ್ತಿದ್ದು, ಚೈನೀಸ್ ಕಾನ್ಸುಲೇಟ್ನಿಂದ ಬಳಿ ದಟ್ಟ ಹೊಗೆ ಬರುತ್ತಿರುವುದು ಕಂಡುಬಂದಿದೆ. ಗುಂಡಿನ ದಾಳಿ ಬೆನ್ನಲ್ಲೇ ಸ್ಫೋಟವೂ ಸಂಭವಿಸಿದ್ದು, ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದೆ.