ರೈತರ ಸಮಸ್ಯೆಗೆ ಸ್ಪಂದಿಸುವುದಕ್ಕಿಂತ ಕುರ್ಚಿ ಉಳಿಸಿಕೊಳ್ಳುವುದೇ ಕುಮಾರಸ್ವಾಮಿಗೆ ಪ್ರಮುಖವಾಗಿದೆ: ಡಿ.ವಿ.ಎಸ್ – ಕಹಳೆ ನ್ಯೂಸ್
ಮಂಗಳೂರು: ರೈತರ ಸಮಸ್ಯೆಗೆ ಸ್ಪಂದಿಸುವುದಕ್ಕಿಂತ ಅಲುಗಾಡುತ್ತಿರುವ ಅವರ ಕುರ್ಚಿ ಉಳಿಸಿಕೊಳ್ಳುವುದೇ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪ್ರಮುಖವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಈ ಸರ್ಕಾರಕ್ಕೆ ರೈತರ ಸಮಸ್ಯೆ ಹಾಗೆಯೇ ಉಳಿಯಬೇಕು. ರೈತ ಅಂತ ಹೇಳಿದ ತಕ್ಷಣ ಅವರ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡುವುದು, ಹಾದಿ ತಪ್ಪಿಸುವುದು ಮಾಡುತ್ತಿದ್ದಾರೆ. ಕಾರ್ಖಾನೆ ಮಾಲೀಕರಾಗಿರುವ ಸಚಿವರು ಮುಖ್ಯಮಂತ್ರಿ ಕರೆದ ಸಭೆಗೆ ಬರಲಿಲ್ಲ. ನಿಮಗೆ ನಾಚಿಕೆಯಾಗ್ಬೇಕು, ಅಂತಹ ಸಚಿವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಿ. ಪಕ್ಷದಿಂದ ಉಚ್ಛಾಟಿಸಿ. ಇಲ್ಲವಾದರೆ ಅವರ ಮನವೊಲಿಸಿ ಕಬ್ಬು ಬೆಳೆಗಾರರಿಗೆ ದುಡ್ಡು ಕೊಡಿಸಿ. ಎರಡನ್ನೂ ಮಾಡದ ದಯನೀಯ ಪರಿಸ್ಥಿತಿಯಲ್ಲಿ ಈ ಸರ್ಕಾರ ಇದೆ ಎಂದು ಡಿವಿ ಹೇಳಿದರು.
ಕೇಂದ್ರ ಸರ್ಕಾರ ಈ ಹಿಂದೆಯೇ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹಣ ಬಿಡುಗಡೆ ಮಾಡುವ ಯೋಜನೆ ರೂಪಿಸಿತ್ತು. ಅದನ್ನು ಬಡ್ಡಿರಹಿತವಾಗಿ ಕಬ್ಬು ಬೆಳೆಗಾರರಿಗೆ ಕೊಡುವ ಯೋಜನೆಯಾಗಿತ್ತು. ಆದರೆ ಈ ವಿಚಾರದಲ್ಲಿ ಮುತುವರ್ಜಿ ವಹಿಸಬೇಕಿದ್ದ ರಾಜ್ಯ ಸರ್ಕಾರ ನಿದ್ದೆ ಮಾಡಿತ್ತು. ಈಗ ಕೇಂದ್ರ ಸರ್ಕಾರ 13 ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಶೇ.50ಕ್ಕಿಂತ ಹೆಚ್ಚು ಬೆಲೆ ನಿಗದಿ ಮಾಡಿದೆ. ಅದಕ್ಕೆ ಅಗತ್ಯ ಇರುವ ಹಣ ಕೂಡ ಮೀಸಲಿಡಲಾಗಿದೆ. ಈ ಸಂಬಂಧ ಎಲ್ಲ ರಾಜ್ಯಗಳು ಖರೀದಿ ಕೇಂದ್ರ ತೆರೆದಿವೆ. ಆದರೆ ಕರ್ನಾಟಕಕ್ಕೆ ಏನು ದಾಡಿ? ಇವರು ಯಾಕೆ ಖರೀದಿ ಕೇಂದ್ರ ತೆರೆದಿಲ್ಲ ಎಂದು ಡಿ.ವಿ. ಪ್ರಶ್ನಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ ರಾಜ್ಯಗಳಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ತೆಲಂಗಾಣದಲ್ಲಿ ಉತ್ತಮ ಸಾಧನೆ ಮಾಡಲಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ಅವರು ಶಬರಿಮಲೆ ವಿಷಯದಲ್ಲಿ ತೆಗೆದುಕೊಂಡಿರುವ ನಿಲುವಿಗೆ ಅವರ ಪಕ್ಷದವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲಿ ಸ್ವಚ್ಛತೆ ಮತ್ತು ಸೌಕರ್ಯಕ್ಕೆ ಆದ್ಯತೆ ಕೊಡುವುದು ಕೇರಳ ಸರ್ಕಾರದ ಕರ್ತವ್ಯ. ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಯಾವುದೇ ಪಕ್ಷಕ್ಕೆ ಬಹುಮತವಿರಲಿಲ್ಲ. ಹಾಗಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಈ ಸರ್ಕಾರಕ್ಕೆ ಹಣ ಕೊಡಲು ಆಗುತ್ತಿಲ್ಲ. ಇವರಿಗೆ ರೈತರ ಸಮಸ್ಯೆ ಹಾಗೆಯೇ ಉಳಿಯಬೇಕು. ರೈತ ಅಂತ ಹೇಳಿದ ತಕ್ಷಣ ಅವರ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡುವುದು, ಹಾದಿ ತಪ್ಪಿಸುವುದು ಮಾಡುತ್ತಿದ್ದಾರೆ. ಕಾರ್ಖಾನೆ ಮಾಲೀಕರಾಗಿರುವ ಸಚಿವರು ಮುಖ್ಯಮಂತ್ರಿ ಕರೆದ ಸಭೆಗೆ ಬರಲಿಲ್ಲ. ನಿಮಗೆ ನಾಚಿಕೆಯಾಗ್ಬೇಕು, ಅಂತಹ ಸಚಿವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಿ. ಪಕ್ಷದಿಂದ ಉಚ್ಛಾಟಿಸಿ. ಇಲ್ಲವಾದರೆ ಅವರ ಮನವೊಲಿಸಿ ಕಬ್ಬು ಬೆಳೆಗಾರರಿಗೆ ದುಡ್ಡು ಕೊಡಿಸಿ. ಎರಡನ್ನೂ ಮಾಡದ ದಯನೀಯ ಪರಿಸ್ಥಿತಿಯಲ್ಲಿ ಈ ಸರ್ಕಾರ ಇದೆ ಎಂದು ಡಿವಿ ಹೇಳಿದರು.