Recent Posts

Sunday, January 19, 2025
ಸುದ್ದಿ

ಪ್ರೇಮಿಗಳಿಬ್ಬರ ಬಿಗ್ ಫೈಟ್: ಪ್ರೇಯಸಿಗೆ ಶೂಟ್​ ಮಾಡಿ ಪ್ರೇಮಿ ಆತ್ಮಹತ್ಯೆ – ಕಹಳೆ ನ್ಯೂಸ್

ಉತ್ತರ ಪ್ರದೇಶ: ಪ್ರೇಮಿಗಳಿಬ್ಬರು ಇಂದು ಬೆಳಗ್ಗೆ ಗೆಸ್ಟ್​ ಹೌಸ್​ ಒಂದರಲ್ಲಿ ರೂಮ್​ ಬುಕ್​ ಮಾಡಿದ್ದರು. ಗೆಸ್ಟ್​ಹೌಸ್​ಗೆ ಬಂದ ಅವರ ನಡುವೆ ಜಗಳ ಶುರುವಾಗಿತ್ತು. ವಾಗ್ವಾದ ತಾರಕಕ್ಕೇರಿ ಕೊನೆಗೆ​ ಪಿಸ್ತೂಲ್​ನಿಂದ ತನ್ನ ಪ್ರೇಯಸಿಗೆ ಶೂಟ್​ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

ಮೃತನನ್ನು ಮೋಹಿತ್​(22) ಎಂದು ಗುರುತಿಸಲಾಗಿದೆ. ಮೋಹಿತ್​ ಮತ್ತು ಯುವತಿ ಘಜಿಯಾಬಾದ್​ನ ಕೋಚಿಂಗ್​ ಸೆಂಟರ್​ ಒಂದರಲ್ಲಿ ಓದುತ್ತಿದ್ದರು. ಮೋಹಿತ್ ಮೂಲತಃ​ ಉತ್ತರಪ್ರದೇಶದ ಬುಲಂದ್ಶರ್​​ನವನಾಗಿದ್ದು, ಘಜಿಯಾಬಾದ್​​ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಂಡೇಟಿಗೆ ಒಳಗಾದ ಯುವತಿಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋಹಿತ್​ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು