ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ರಾಜ್ಯದೆಲ್ಲೆಡೆ ಆನೆ ದಾಳಿ ನಿರಂತರವಾಗಿ ನಡೆಯುತ್ತಿದ್ದು ಆನೆ ದಾಳಿಗೆ ಜನ ಬೇಸತ್ತು ಹೋಗಿದ್ದಾರೆ. ಮಾನವ ಮತ್ತು ವನ್ಯಜೀವಿ ಸಂಘರ್ಷ ಅನೇಕ ಶತಮಾನಗಳಿಂದಲೂ ಇದ್ದರೂ ಇಲ್ಲೊಂದು ಕಾಡಾನೆ ಮಾತ್ರ ತಾನಾಯ್ತು ತನ್ನ ಆಹಾರವಾಯ್ತು ಎಂದು ಜನರ ಪಕ್ಕದಲ್ಲೇ ಬಂದು ತೊಂದರೆ ನೀಡದೆ ಹಿಂದಿರುಗಿ ಹೋಗುತ್ತದೆ.
ಚಿಕ್ಕಮಗಳೂರಿನ ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯದಲ್ಲಿ ಇರುವ ಈ ಗಜರಾಜ ಕಾಡಿನ ಮಧ್ಯೆ ಇರುವ ಅರಣ್ಯ ಇಲಾಖೆ ಕಳ್ಳ ಭೇಟೆ ನಿಗ್ರದ ದಳದ ವಸತಿ ನಿಲಯ ಹಾಗೂ 1924ರಲ್ಲಿ ಬ್ರಿಟೀಷರು ನಿರ್ಮಿಸಿರುವ ಅತಿಥಿ ಗೃಹದ ಪಕ್ಕದಲ್ಲೇ ಬಂದು ನಿಂತು ಗಂಟೆ ಗಟ್ಟಲೆ ಪೋಸ್ ನೀಡಿ ಶಾಂತಿಯಿಂದ ವರ್ತಿಸುತ್ತಿರುವುದು ಎಲ್ಲರಲ್ಲೂ ಆಶ್ವರ್ಯ ಮೂಡಿಸಿದೆ.
ಜೊತೆಗೆ ಕಾಡಾನೆಗಳು ಅಪಾಯಕಾರಿ ಎಂಬ ಮಾತಿಗೂ ಈ ಗಜರಾಜ ವಿರುದ್ಧವಾಗಿ ಮೌನದಿಂದಲೇ ವರ್ತಿಸುತ್ತಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಆನೆಯ ಈ ವರ್ತನೆ ಆಶ್ಚರ್ಯ ಮೂಡಿಸಿದೆ.