Recent Posts

Monday, January 20, 2025
ಸುದ್ದಿ

ಬೈಕ್ ಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ: ಬೈಕ್ ಸವಾರನ ದೇಹ ಛಿದ್ರ – ಕಹಳೆ ನ್ಯೂಸ್

ಪುತ್ತೂರು: ಬೈಕ್ ಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ದೇಹ ಛಿದ್ರಗೊಂಡ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡದ ನೆಲ್ಯಾಡಿ ಬಳಿ ನಡೆದಿದೆ. ಬೈಕ್ ಸವಾರ ಕೊನಾಲು ಗ್ರಾಮದ ಕಡೆಂಬಿಲ ನಿವಾಸಿ ಜಗದೀಶ್ ಸ್ಥಳದಲ್ಲೇ ಸಾವಿಗೀಡಾದವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ತಾಲೂಕಿನ ಕೊನಾಲು ಗ್ರಾಮದ ಆರ್ಲದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಜಗದೀಶ್ ರವರು ತನ್ನ ಬೈಕ್ ನಲ್ಲಿ ನೆಲ್ಯಾಡಿಯಿಂದ ಮನೆಗೆ ಹೋಗುತ್ತಿದ್ದ ವೇಳೆ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಟ್ಯಾಂಕರ್, ಬೈಕ್ ಗೆ ಡಿಕ್ಕಿ ಹೊಡೆದಿದೆ. ಮೃತರು ವೃತ್ತಿಯಲ್ಲಿ ಟೈಲರ್ ಆಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಬಂದ ಉಪ್ಪಿನಂಗಡಿ ಠಾಣಾ ಪೊಲೀಸರು ರಸ್ತೆಯ ಇಬ್ಬಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಟ್ಯಾಂಕರ್ ತೆರವು ಕಾರ್ಯಾಚರಣೆಗೆ ನೆರವಾದ್ರು.