ಬೆಂಗಳೂರು: ಚಂಡಮಾರುತಕ್ಕೆ ನಲುಗಿದ ತಮಿಳುನಾಡಿನ ಜನತೆಗೆ ಬೆಸ್ಕಾಂ ನೌಕರರು ಸಹಾಯ ಹಸ್ತ ಚಾಚಿದ್ದಾರೆ.ಬೆಂಗಳೂರಿನ ಬೆಸ್ಕಾಂ ನೌಕರರು ಸ್ವಯಂ ಸೇವೆ ನೀಡಲು ಮುಂದಾಗಿದ್ದು, ಈಗಾಗಲೇ ತಮಿಳುನಾಡಿಗೆ 1,000 ಬೆಸ್ಕಾಂ ನೌಕರರು ತೆರೆಳಿದ್ದಾರೆ.
ಗಜ ಚಂಡಮಾರುತದಿಂದ 1 ಲಕ್ಷಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದು ಹಾಳಾಗಿವೆ. ಅಲ್ಲದೇ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆ ತಮಿಳುನಾಡಿನಿಂದ ಸಹಾಯ ಕೋರಿ ಪತ್ರ ಬಂದಿತ್ತು.
ಪತ್ರ ಬಂದ ಹಿನ್ನೆಲೆ ರಾಜ್ಯ ಸರ್ಕಾರದ ಮೌಖಿಕ ಆದೇಶದ ಮೇರೆಗೆ ನೌಕರರು ತಮಿಳುನಾಡಿಗೆ ತೆರೆಳಿದ್ದಾರೆ. ತಮಿಳುನಾಡಿಗೆ ತೆರಳಿ ಹತ್ತು ದಿನಗಳ ಕಾಲ ಅಲ್ಲಿಯೇ ಉಳಿದು ಬೆಸ್ಕಾಂ ನೌಕರರು ಸೇವೆ ಮಾಡಲಿದ್ದಾರೆ.
10 ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ನೌಕರರು ತೆರೆಳಿದ್ದಾರೆ. ಬೆಸ್ಕಾಂ ನೌಕರರು ಫ್ರೀಡಂ ಪಾರ್ಕ್ ನಿಂದ 10 ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ತೆರೆಳಿದ್ದಾರೆ. ಅಲ್ಲಿ ಸ್ವಯಂಕೃತವಾಗಿ ಸೇವೆ ಸಲ್ಲಿಸಿ ವಾಪಾಸ್ಸ್ ಆಗಲಿದ್ದಾರೆ.