Recent Posts

Monday, January 20, 2025
ಸುದ್ದಿ

ಸಂಬಂಧಗಳ ಮೌಲ್ಯಗಳನ್ನು ತಿಳಿಹೇಳುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು: ಸತ್ಯನಾರಾಯಣ ಶರ್ಮ – ಕಹಳೆ ನ್ಯೂಸ್

ಬದಿಯಡ್ಕ: ಕೌಟುಂಬಿಕ ಸಂಬಂಧಗಳು ಮುರಿದು ಬೀಳುತ್ತಿರುವ ಕಾಲಘಟ್ಟದಲ್ಲಿ ಸಂಬಂಧಗಳ ಮೌಲ್ಯಗಳನ್ನು ತಿಳಿಹೇಳುವ ವಾತ್ಸಲ್ಯದ ಬೆಸುಗೆಯನ್ನು ಗಟ್ಟಿಗೊಳಿಸುವ ಕಾರ್ಯಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಅನಿವಾರ್ಯತೆ ಇದೆ. ಹಿರಿಯರಲ್ಲಿ, ಬಂಧುಮಿತ್ರರಲ್ಲಿ, ಸಮಾಜ ಬಾಂಧವರಲ್ಲಿ ಆತ್ಮೀಯತೆಯನ್ನು ಬೆಳೆಸುವುದರಿಂದ ದ್ವೇಷ, ಅಸೂಯೆಗಳು ಕಮರಿ ಹೋಗಿ ನೆಮ್ಮದಿಯನ್ನು ಕಾಣಲು ಸಾಧ್ಯ ಎಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶುಕ್ರವಾರ ಕಾರ್ತಿಕ ಮಾಸ ಹುಣ್ಣಿಮೆಯ ವಿಶೇಷ ದಿನದಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ `ಬೆಸುಗೆಯ ಒಸಗೆ’ ಮಾತೃಪೂಜನದ ನೇತೃತ್ವವನ್ನು ವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಿಷಯಾಧಾರಿತ ಪಠ್ಯ ಪ್ರವಚನಗಳ ಜೊತೆಯಲ್ಲಿ ದೈನಂದಿನ ಜೀವನದಲ್ಲಿ ಅತೀಅಗತ್ಯವಾಗಿ ಅನುಸರಿಸಬೇಕಾದ ಶಿಸ್ತುಬದ್ದ ಜೀವನಕ್ರಮವನ್ನೂ ತಿಳಿಸಿಕೊಡಬೇಕು. ಇದಕ್ಕೆ ಪಾಲಕರನ್ನೂ ಜೊತೆಗೂಡಿಸಿಕೊಂಡು ಉತ್ತಮ ಸಂಸ್ಕಾರಭರಿತ ಕಾರ್ಯಕ್ರಮವಾಗಿ ಹಮ್ಮಿಕೊಂಡಿರುತ್ತೇವೆ ಎಂದರು.

ನಂತರ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹೆತ್ತವರು ಭಾವುಕರಾಗಿ ಮಕ್ಕಳನ್ನು ಹರಸಿದ ಸಂದರ್ಭ ಅನಿರ್ವಚನೀಯವಾಗಿತ್ತು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶಾಮ ಭಟ್ ಬೇರ್ಕಡವು ಮಾತನಾಡಿ ಇಂತಹ ಅಪರೂಪದ ಕ್ಷಣದಲ್ಲಿ ಭಾಗಿಯಾಗಿದ್ದು ಮನಸ್ಸಿಗೆ ಮುದನೀಡಿದೆ ಎಂದು ಹೇಳುವುದರೊಂದಿಗೆ ಹೆತ್ತವರಿಗೆ ಹಾಗೂ ಶಾಲೆಗೆ ಕೀರ್ತಿ ತರುವಂತಹ ಕಾರ್ಯಗಳನ್ನು ಮಾಡಬೇಕು ಎಂದರು. ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.