Recent Posts

Sunday, January 19, 2025
ಸುದ್ದಿ

ಹೆರಿಗೆಗಾಗಿ ತವರು ಮನೆಗೆ ಬಂದಿದ್ದ ಬಾಣಂತಿ ಆತ್ಮಹತ್ಯೆ – ಕಹಳೆ ನ್ಯೂಸ್

ಪುತ್ತೂರು: ಹೆರಿಗೆಗಾಗಿ ತವರು ಮನೆಗೆ ಬಂದಿದ್ದ ಬಾಣಂತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ಸಂಪ್ಯ ಮಲಾರ್ ನಲ್ಲಿ ನಡೆದ ಘಟನೆ ನ.24 ರಂದು ಬೆಳಕಿಗೆ ಬಂದಿದೆ.

ಸಂಪ್ಯ ಮಲಾರು ದಿ.ಕೇಶವ ಆಚಾರ್ಯ ಮತ್ತು ಸುಶೀಲ‌ ದಂಪತಿ ಪುತ್ರಿ ವೀಣಾ( 36) ಅವರು ಮೃತ ಪಟ್ಟವರು.

ಜಾಹೀರಾತು
ಜಾಹೀರಾತು
ಜಾಹೀರಾತು

2 ವರ್ಷಗಳ ಹಿಂದೆ ವೀಣಾ ಅವರನ್ನು ವಾಮದ ಪದವು ಉಮೇಶ್ ಆಚಾರ್ಯ ಅವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಕಳೆದ 4 ತಿಂಗಳ ಹಿಂದೆ ವೀಣಾ ಅವರು ಹೆರಿಗೆಗಾಗಿ ತವರು ಮನೆಗೆ ಬಂದಿದ್ದ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದೆರಡು ದಿನಗಳ ಹಿಂದೆ ಮಗುವಿನ ನಾಮಕರಣ ಕಾರ್ಯಕ್ರಮ ನಡೆದಿತ್ತು. ನ.24 ರಂದು ಬೆಳಿಗ್ಗೆ ಮಗು ಅಳುತ್ತಿದೆ ಎಂದು ವೀಣಾ ಅವರ ತಾಯಿ ಕೊಠಡಿಗೆ ಹೋಗಿ ನೋಡಿದಾಗ ವೀಣಾ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧಿಸಿ ಪುತ್ತೂರು ತಹಶೀಲ್ದಾರ್, ಸಂಪ್ಯ ಪೊಲೀಸರು ಘಟನಾ ಸ್ಥಳಕ್ಕೆ ತೆರಲಿದ್ದಾರೆ.