Recent Posts

Sunday, January 19, 2025
ಸುದ್ದಿ

ಸರಕಾರ ನಿದ್ದೆಯಲ್ಲಿದೆ, ಇದೆಯೋ ಇಲ್ಲವೋ ಅನ್ನುವುದೇ ಗೊತ್ತಾಗುತ್ತಿಲ್ಲ: ವಿಜಯೇಂದ್ರ – ಕಹಳೆ ನ್ಯೂಸ್

ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರ ನಿದ್ದೆಯಲ್ಲಿದೆ, ಸರಕಾರ ಇದೆಯೋ ಇಲ್ಲವೋ ಅನ್ನುವುದೇ ಗೊತ್ತಾಗುತ್ತಿಲ್ಲ ಎಂದು ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅವರು ಹೇಳಿದರು.

ಅವರು ಜಿಲ್ಲೆಯ ವಿವಿಧ ಕಾರ್ಯಕ್ರಮ ಗಳ ಹಿನ್ನಲೆಯಲ್ಲಿ ಆಗಮಿಸಿದ ಸಂಧರ್ಭದಲ್ಲಿ ಬಿಸಿರೋಡಿನ ಪಕ್ಷದ ಕಚೇರಿಗೆ ತೆರಳಿ ಕಾರ್ಯಕರ್ತರೊಂದಿಗೆ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸತಕಾರದ ಯಾವೊಂದು ಕೆಲಸಗಳು ಅಗುತ್ತಿಲ್ಲ, ರೈತರ ಸಮಸ್ಯೆ ಬಗೆಹರಿದಿಲ್ಲ. ರೈತರು ದಿನಾ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಅದರೂ ಮುಖ್ಯಮಂತ್ರಿ ಸಾಲಮನ್ನಾ ಮಾಡುತ್ತೇನೆ ಎಂದು ಭಾಷಣ ಮಾಡುವುದು ಕೇವಲ ನಾಟಕ, ರಾಜ್ಯ ಸರಕಾರದ ವೈಫಲ್ಯ ಗಳನ್ನು ಮರೆಮಾಚಲು ಕೇಂದ್ರ ಸರಕಾರದ ವಿರುದ್ದ ಬೆರಳುತೋರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾತಿ ಧರ್ಮದ ವಿಷ ಬೀಜದ ತಲೆಕೆಡಿಸಿಗೊಳ್ಳದೆ ಸಮರ್ಥ ಬಿಜೆಪಿ ಅಭ್ಯರ್ಥಿಗಳ ನ್ನು ಆರಿಸಿದ ಜಿಲ್ಲೆಯ ಜನರಿಗೆ ಅಭಿನಂದನೆ ಸಲ್ಲಿಸಿದರು. ‌
ಎಂಟು ಕ್ಷೇತ್ರ ಗಳ ಪೈಕಿ ಏಳು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ದ.ಕ.ಜಿಲ್ಲೆಯ ನ್ನು ಬಜೆಟ್ ನಲ್ಲಿ ಉದ್ದೇಶ ಪೂರ್ವಕವಾಗಿ ಕೈಬಿSಡುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು. ‌
ಇವರಿಗೆ ಅಭಿವೃದ್ಧಿ ಯ ಬಗ್ಗೆ ಯೋಚನೆಯೆ ಇಲ್ಲ ಎಂದ ಅವರು ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಗೆ ವಿರೋಧಿ ಗಳು ಮೋದಿ ಯವರ ಬಗ್ಗೆ ಅಪಪ್ರಚಾರ ಮಾಡಲು ಶುರು ಮಾಡಿದ್ದಾರೆ. ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ ಎಂದು ಅವರು ಹೇಳಿದರು.

ಈ ಸಂಧರ್ಭದಲ್ಲಿ ರಾಮನಗರ ಜಿಲ್ಲಾದ್ಯಕ್ಷ ರುದ್ರೇಶ್, ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಯುವಮೋರ್ಚಾದ ಉಪಾಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು, ಪ್ರಧಾನ ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಬಿಜೆಪಿ ಅದ್ಯಕ್ಷ ದೇವದಾಸ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ, ಜಿಲ್ಲಾ ಬಿಜೆಪಿ ವಕ್ತಾರ ಹರಿಕ್ರಷ್ಣ ಬಂಟ್ವಾಳ್, ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಮೋನಪ್ಪ ದೇವಸ್ಯ,
ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ ಬಜ ಕ್ಷೇತ್ರ ಯುವಮೋರ್ಚಾ ಅದ್ಯಕ್ಷ ವಜ್ರನಾಥ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಸಂತೋಷ್, ಉಪಾಧ್ಯಕ್ಷ ರಾದ ವಿನೀತ್ ಶೆಟ್ಟಿ, ಕಾರ್ಯದರ್ಶಿ ಗಳಾದ ಲೋಕೇಶ್ ಭರಣಿ, ಸುರೇಶ್ ಕೋಟ್ಯಾನ್, ರೂಪೇಶ್ ಆಚಾರ್ಯ, ಲೋಹಿತ್ ಕೊಲ್ನಾಡು, ಕಾರ್ತಿಕ ಬಲ್ಲಾಳ್, ಮತ್ತಿತರರು ಉಪಸ್ಥಿತರಿದ್ದರು.