ಬೆಂಗಳೂರು: ಮೈಸೂರು ಬೆಂಗಳೂರು ಜನ್ರಿಗೆ ಒಂದು ಭರ್ಜರಿ ಗುಡ್‍ನ್ಯೂಸ್. ಅದೇನಪ್ಪಾ ಅಂದ್ರೆ, ಕೇವಲ 140 ನಿಮಿಷಗಳಲ್ಲಿ ಬುಲೆಟ್ ರೈಲಿನ ಮೂಲಕ ಅರಮನೆ ನಗರಿ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ಪ್ರಯಾಣಿಸಬಹುದಾದ ಭಾಗ್ಯ ಒದಗಿಬಂದಿದೆ.
ವಿಮಾನ ಪ್ರಯಾಣಕ್ಕಿಂತ ವೇಗವಾಗಿ ಉಭಯ ನಗರಗಳ ನಡುವೆ ಬುಲೆಟ್ ರೈಲು ಸಂಚಾರ ಸಾಧ್ಯವಾಗಲಿದೆ ಅಂತ ಮೋದಿ ಸರ್ಕಾರಕ್ಕೆ ಜರ್ಮನಿ ಕಾರ್ಯಸಾಧು ವರದಿ ನೀಡಿದೆ. ಸರ್ಕಾರ ಸಹಮತಿಸಿದರೆ 2030 ರೊಳಗೆ ಯೋಜನೆ ಅಂತ್ಯವಾಗಲಿದ್ದು, ಸುಮಾರು 435 ಕಿ.ಮೀ ಬುಲೆಟ್ ರೈಲು ಕಾಮಗಾರಿಯ ಸಮಗ್ರ ಯೋಜನಾ ವರದಿಯನ್ನು ಜರ್ಮನಿ ರಾಯಭಾರ ಕಚೇರಿ ಸಿದ್ಧಪಡಿಸಿದೆ.
ಮೈಸೂರು-ಬೆಂಗಳೂರು-ಚೆನ್ನೈ ನಡುವಿನ 435ಕಿಮೀ ಮಾರ್ಗಕ್ಕೆ ಸುಮಾರು 1ಕೋಟಿ ರೂ ಖರ್ಚಾಗಬಹುದು ಎಂದು ಜರ್ಮನಿ ತಿಳಿಸಿದೆ. ಹಾಗೆಯೇ ವಿಮಾನದ ಪ್ರಯಾಣಕ್ಕಿಂತ ಈ ಬುಲೆಟ್ ರೈಲಿನಿಂದ ಸಮಯದ ಉಳಿತಯವೂ ಆಗುತ್ತೆ ಎಂಬುದಾಗಿ ವರದಿ ನೀಡಿದೆ.
ಒಟ್ಟಿನಲ್ಲಿ ಬುಲೆಟ್ ರೈಲು ದಕ್ಷಿಣ ಭಾರತಕ್ಕೆ ಬರೋದಿಕ್ಕೆ ರೆಡಿ ಆಗ್ತಾ ಇದೆ. ಹಾಗೆಯೇ ಪ್ರಯಾಣಿಸೋದಿಕ್ಕೆ ನಾವೂ ರೆಡಿ ಆಗಿರ್ಬೇಕು ಅಷ್ಟೇ.