Saturday, November 23, 2024
ಸುದ್ದಿ

ಮಂಡ್ಯ ಬಸ್ ದುರಂತ: ಕರುನಾಡಿನ ಪಾಲಿಗೆ ಘೋರ ದುರಂತ – ಕಹಳೆ ನ್ಯೂಸ್

ಮಂಡ್ಯ: ಇವತ್ತು ನಡೆದ ಮಂಡ್ಯ ಬಸ್ ದುರಂತ ನಿಜಕ್ಕೂ ಎಲ್ಲರಿಗೂ ಆತಂಕವನ್ನ ಸೃಷ್ಟಿಸಿದ್ದು ಸುಳ್ಳಲ್ಲ. ಹೌದು ಇಂದು ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಒಂದದು ಸುದ್ದಿ ಇಡೀ ರಾಜ್ಯದಲ್ಲಿ ಸಂಚಲನಚವನ್ನು ಉಂಟು ಮಾಡಿತ್ತು ಸಕ್ಕರೆ ನಗರಿಯ ಕನಗನ ಮರಡಿಯಲ್ಲಿ ಬಿಳಿ ಬಣ್ಣದ ಬಸ್ಸು ನಾಲೆಗೆ ಬಿದ್ದು 20 ಕ್ಕೂ ಹೆಚ್ಚು ಜನರ ಜೀವವನ್ನ ಬಲಿ ಪಡೆದಿದೆ.

ಇವತ್ತು 30 ಕ್ಕೂ ಹೆಚ್ಚು ಜನ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ರು. ಪಾಂಡವಪುರದಿಂದ ಮಂಡ್ಯಕ್ಕೆ ಪ್ರಯಾಣ ಬೆಳೆಸಿದ್ದ ರಾಜ್‍ಕುಮಾರ ಅನ್ನೋ ಬಸಲ್ಲಿ ಎಷ್ಟು ಪುಟ್ಟ ಪುಟ್ಟ ಮಕ್ಕಳಿದ್ರೋ..ಅದೆಷ್ಟು ವಯಸ್ಕರಿದ್ರೋ..ಅವರಿಗ್ಯಾರಿಗೂ ಈಗ ನಾವಿರೋ ಬಸ್ ನಾಲೆಗೆ ಬಿದ್ದು ನಮ್ ಪ್ರಾಣವನ್ನು ಬಲಿ ಪಡೆಯುತ್ತೆ ಅನ್ನೋ ಸಣ್ಣ ಸುಳಿವು ಇರ್ಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಷಯ ಗೊತ್ತಾಗ್ತ ಇದ್ದಂತೆ ಊರಿನ ಗ್ರಾಮಸ್ಥರೇ ಕಾರ್ಯಾಚರಣೆಗೆ ಕೈ ಜೋಡಿಸಿದ್ರು. ಪ್ರತಿಯೊಂದು ಕ್ಷಣಕ್ಕೂ ಮೃತ ದೇಹ ಸಂಖ್ಯೆ ಹೆಚ್ಚಾಗ್ತಾ ಇತ್ತು. ಇತ್ತ ಕಡೆ ಮೃತರ ಸಂಬಂಧಿಗಳ ಕೂಗು ಕೂಡ ಮುಗಿಲು ಮುಟ್ಟುವಂತಿತ್ತು. ಇನ್ನೂ ಘಟನಾ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆಯನ್ನ ಕೂಡ ಮಾಡಲಾಯ್ತು. ಇಷ್ಟೆಲ್ಲಾ ಅನಾಹುತಕ್ಕೆ ಚಾಲಕನ ನಿರ್ಲಕ್ಷ್ಯ ಜೊತೆಗೆ ಸ್ಟೀರಿಂಗ್ ಲಾಕ್ ಆಗಿದ್ದೇ ಕಾರಣ ಅಂತ ಹೇಳಲಾಗ್ತ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ ಕುಮಾರ ಬಸ್ 50 ಕೀ ಮೀ ವೇಗದಲ್ಲಿತ್ತು, ಅಲ್ಲೆ ಸ್ವಲ್ಪ ತಿರುವು ಪಡೆದಿದ್ದೆ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಯ್ತು. ಬಸ್ ನಾಲೆಗೆ ಬಿದ್ದಿದೆ ಅನ್ನೋ ವಿಷಯ ಮಾಧ್ಯಮಗಳಿಗೂ ತಿಳಿಯುತ್ತಿದ್ದಂತೆ ಇತ್ತ ರಾಜ್ಯದ ಮುಖ್ಯಮಂತ್ರಿಯವರಿಗೂ ವಿಷಯ ಗೊತ್ತಾಗಿ ಹೋಗಿತ್ತು. ವಿಷಯ ತಿಳಿದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ನಿಜಕ್ಕೂ ಆಘಾತ ಆಗಿತ್ತು.

ಇದೇ ವೇಳೆ ದುರಂತದಲ್ಲಿ ಮಡಿದ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ರು. ಬಸ್ ನಾಲೆಗೆ ಬಿದ್ದ ವಿಚಾರ ತಿಳಿದು ರಾಷ್ಟ್ರ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್,ಹಾಗೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂತಾಪ ವ್ಯಕ್ತ ಪಡಿಸಿದ್ರು. ಏನೇ ಆದ್ರೂ ಇವತ್ತಿನ ಘಟನೆ ಕರುನಾಡಿನ ಪಾಲಿಗೆ ಘೋರ ದುರಂತ ಅಂದ್ರೆ ತಪ್ಪಾಗೊಲ್ಲ.

ನ್ಯೂಸ್ ಬ್ಯೂರೋ ರಕ್ಷಿತಾ ಆಳ್ವ