
ಪುತ್ತೂರು: ದೇಶದ ಟಾಪ್ ಕಾರು ಕಂಪೆನಿಗಳು ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಗುಣಮಟ್ಟದ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಹಾಗೆಯೇ ಮಾರುತಿ ಸುಜುಕಿ ತನ್ನ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಎರ್ಟಿಗಾ ಸೀರಿಸ್‍ನ ದಿ ನೆಕ್ಸ್ಟ್ ಜೆನ್ ಎರ್ಟಿಗವನ್ನು ಹಾರಾಡಿ ಭಾರತ್ ಆಟೋ ಕಾರ್ಸ್ ನಲ್ಲಿ ಬಿಡುಗಡೆ ಮಾಡಿದರು. ಈ ವಿನೂತನ ಕಾರಲ್ಲಿ ಅತ್ಯುತ್ತಮ ಹಾಗೂ ಅತ್ಯಾಧುನಿಕ ಸೇವಾ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಈ ನೂತನ ಶೈಲಿಯ ಕಾರನ್ನು ಪುತ್ತೂರಿನ ಉದ್ಯಮಿ, ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಅನಾವರಣಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‍ನ ಸಂಚಾಲಕ ಗೋಕುಲ್‍ನಾಥ್ ಪಿವಿ, ಮಾತನಾಡಿ ಭಾರತ್ ಆಟೋ ಕಾರ್ಸ್ ಸಂಸ್ಥೆಯು ನೀಡುತ್ತಿರುವ ಸೇವೆಯ ಬಗ್ಗೆ ಶ್ಲಾಘಿನೆಯ ಮಾತುಗಳನ್ನು ಆಡಿದರು. ಈ ಸಂದರ್ಭ ಗ್ಲೋರಿಯಾ ಕಾಲೇಜಿನ ಅಧ್ಯಕ್ಷ ಆನಂದ ಆಚಾರ್ಯ, ಭಾರತ್ ಆಟೋ ಕಾರ್ಸ್‍ನ ಸೀನಿಯರ್ ಸೇಲ್ಸ್ ಮ್ಯಾನೇಜರ್ ಡೆನ್ನಿಸ್ ಗೊನ್ಸಾಲ್ವಿಸ್ ಮತ್ತಿತರರು ಉಪಸ್ಥಿತರಿದ್ದರು.