Recent Posts

Sunday, January 19, 2025
ಸುದ್ದಿ

ಕೇಂದ್ರ ಮಾಜಿ ಸಚಿವ ಜಾಫರ್ ಇನ್ನು ನೆನಪು ಮಾತ್ರ – ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಮಾಜಿ ಸಚಿವ ಜಾಫರ್ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನವನ್ನಪ್ಪಿದ್ದಾರೆ. 85 ವರ್ಷದ ಹಿರಿಜೀವ ಜಾಫರ್ ಆನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಕಾಂಗ್ರೆಸ್‍ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. 1933ರ ನವೆಂಬರ್ 3 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜನಿಸಿದ ಜಾಫರ್ ಷರೀಪ್ ಇನ್ನು ನೆನಪು ಮಾತ್ರ. ಜಾಪರ್ 1991 ರಿಂದ 1995ರ ತನಕ ಕೇಂದ್ರದ ರೈಲ್ವೇ ಸಚಿವರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಇವರಿಗಿದೆ. ಅಂತೆಯೇ ಇಂದಿರಾಗಾಂಧಿಗೆ ಆಪ್ತರಾಗಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು