ರಾಮ ಮಂದಿರದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಬೇಗ ತೀರ್ಪು ಕೊಡಲಿ ನಾಗ್ಪುರದಲ್ಲಿ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಆಗ್ರಹ – ಕಹಳೆ ನ್ಯೂಸ್
ನಾಗ್ಪುರ: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರದಲ್ಲಿ ಎದುರಾಗಿರುವ ವಿವಾದಕ್ಕೆ ಸುಪ್ರೀಂ ಕೋರ್ಟ್ ಪ್ರಾಮುಖ್ಯತೆ ನೀಡುತ್ತಿಲ್ಲ. ನ್ಯಾಯದಾನ ವಿಳಂಬವೆಂದರೆ ನ್ಯಾಯ ನಿರಾಕರಣೆ ಎಂದೇ ಅರ್ಥ ಎಂದು ಆರ್ಎಸ್ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಆಯೋಜಿಸಿರುವ ಜನಾಗ್ರಹ ಸಭೆಯಲ್ಲಿ ಮಾತನಾಡಿರುವ ಅವರು, ” ರಾಮ ಮಂದಿರ ನಿರ್ಮಾಣದ ಬೇಡಿಕೆ ಕಳೆದ 30 ವರ್ಷಗಳಿಂದಲೂ ನನೆಗುದಿಗೆ ಬಿದ್ದಿದೆ. ಸುಪ್ರೀಂ ಕೋರ್ಟ್ ಈ ವಿವಾದದಲ್ಲಿ ಶೀಘ್ರವೇ ತೀರ್ಪು ಪ್ರಕಟಿಸಬೇಕು,” ಎಂದು ಅವರು ಒತ್ತಾಯಿಸಿದರು.
” ವಿವಾದಿತ ಸ್ಥಳದಲ್ಲಿ ರಾಮನ ಮಂದಿರ ಇತ್ತು ಎಂಬುದು ಸಾಬೀತಾಗಿದೆ. ವಿವಾದ ಕೋರ್ಟ್ನಲ್ಲಿದೆ. ಕೋರ್ಟ್ ಬೇಗ ತೀರ್ಪು ನೀಡಬೇಕಿದೆ,” ಎಂದೂ ಅವರು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ರಾಜ್ಯದ ಉಡುಪಿ, ಹುಬ್ಬಳ್ಳಿ, ಗದಗ ಸೇರಿದಂತೆ ದೇಶದ ವಿವಿಧೆಡೆ ಜನಾಗ್ರಹ ಸಭೆಗಳು ನಡೆಯುತ್ತಿವೆ. ಇದೇ ವೇಳೆ ಆಯೋಧ್ಯೆಯೆಯಲ್ಲಿ ಧರ್ಮ ಸಂಸದ್ ಪರಿಷತ್ ಸಭೆಯೂ ನಡೆಯುತ್ತಿದೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬುದು ಈ ಸಭೆಗಳ ಆಗ್ರಹವಾಗಿದೆ. ಇದಕ್ಕಾಗಿ ಕಾನೂನು, ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂಬುದು ಸಾಧು ಸಂತರು, ಹಿಂದು ಸಂಘಟನೆಗಳ ಒತ್ತಾಯವಾಗಿದೆ.